ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚನ್ನರಾಯಪಟ್ಟಣ ಪಪಂ: ಶೇ.74.2

Rashmi Kasaragodu
Updated On : 7 Mar 2013, 11:09 am

ಕಪ್ರವಾರ್ತೆ  ಚನ್ನರಾಯಪಟ್ಟಣ  ಮಾ.7
ಪಟ್ಟಣ ಪುರಸಭೆಗೆ ಗುರುವಾರ ನಡೆದ ಚುನಾವಣೆ ಶಾಂತಿಯುತ ನಡೆದು, ಶೇ.74.2ರಷ್ಟು ಮತದಾನವಾಗಿದೆ. ಪುರಸಭೆಯ 24014 ಮತದಾರರಲ್ಲಿ 17850 ಮಂದಿ ಮತ ಚಲಾಯಿಸಿದ್ದು, 3ನೇ ವಾರ್ಡ್‌ನಲ್ಲಿ ಶೇ.83.6 ರಷ್‌ಠು ಅಧಿಕ ಮತದಾನವಾಗಿದ್ದರೆ, 19ನೇ ವಾರ್ಡ್‌ನಲ್ಲಿ ಶೇ.61.1ರಷ್ಟು ಮತದಾನವಾಗಿದ್ದು 23ವಾರ್ಡ್‌ಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ.
ಮತದಾರರು ಬೆಳಗ್ಗೆ ಸ್ವಲ್ಪ ಚುರುಕಾಗಿ ಮತದಾನದಲ್ಲಿ ಪಾಲ್ಗೊಂಡರೆ ನಂತರದಲ್ಲಿ ಎಲ್ಲಾ ಮತಕೇಂದ್ರಗಳಲ್ಲಿಯೂ ಮಂದಗತಿಯಲ್ಲಿ ಮತದಾನ ನಡೆಯಿತು. ಮತದಾನ ಕೇಂದ್ರದ ಬಳಿಯೂ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತಯಾಚನೆ ಮಾಡುತ್ತಿದ್ದರೂ ಯಾರೂ ಅವರ ಬಗ್ಗೆ ಗಮನ ನೀಡದೆ ತಮ್ಮ ಮತ ಚಲಾಯಿಸಲು ಮತದಾನ ಕೇಂದ್ರದತ್ತಾ ತೆರಳುತ್ತಿದ್ದರು. ಒಂದನೇ ವಾರ್ಡ್‌ನಲ್ಲಿ  938 ಮತದಾರರಲ್ಲಿ 683ಮಂದಿ ಮತ ಚಲಾಯಿಸಿದ್ದು,ಶೇ.72.8 ಮತದಾನವಾಗಿದೆ. ವಾರ್ಡ್.2ರಲ್ಲಿ 1033(1540) ಶೇ.67,  3ನೇ ವಾರ್ಡ್. 596(713) ಶೇ.83.6, 4ನೇವಾರ್ಡ್.846(1151) ಶೇ.73.5, 5ನೇ ವಾರ್ಡ್. 744(1069) ಶೇ. 69.6, 6ನೇ ವಾರ್ಡ್ 865 (1139) ಶೇ. 75.9, 7ನೇ ವಾರ್ಡ್564(759) ಶೇ.74.3, 8ನೇ ವಾರ್ಡ್ 1051(1351) ಶೇ.77.8, 9ನೇ ವಾರ್ಡ್ 699(904) ಶೇ. 77.3, 10ನೇ ವಾರ್ಡ್1007(1382) ಶೇ.72.8, 11ನೇ ವಾರ್ಡ್1179(1547) ಶೇ.76.2 ರಷ್ಟು ಮತದಾನವಾಗಿದೆ.
 12ನೇ ವಾರ್ಡ್682(986)ಶೇ.69.1, 13ನೇ ವಾರ್ಡ್926 (1172) ಶೇ.79, 14ನೇ ವಾರ್ಡ್1023(1396) ಶೇ.73.2, 15ನೇ ವಾರ್ಡ್ 434(587) ಶೇ.73.9,16ನೇ ವಾರ್ಡ್ 636(885) ಶೇ.71.8, 17ನೇ ವಾರ್ಡ್ 620 (787) ಶೇ.78.7, 18ನೇ ವಾರ್ಡ್1034 (1380) ಶೇ.73.2, 19ನೇ ವಾರ್ಡ್ 651(1065) ಶೇ.61.12, 20ನೇ ವಾರ್ಡ್ 808 (1090) ಶೇ.74.1, 21ನೇ ವಾರ್ಡ್ 569 (700)ಶೇ.81.1, 22ನೇ ವಾರ್ಡ್ 527 (654) ಶೇ.80.5, 23ನೇ ವಾರ್ಡ್‌ನಲ್ಲಿ 820 ಮತದಾರರಲ್ಲಿ 637 ಮಂದಿ ಮತ ಚಲಾಯಿಸಿದ್ದು, ಶೇ. 77.6 ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ್ ನಟರಾಜು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement