ನಾಟಕ ತರಬೇತಿ ಸಮಾರೋಪ
ಹಾಸನ: ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಮತ್ತು ಶ್ರೀರಾಮ ಕಲಾವೃಂದ ಶ್ರೀರಾಮನಗರ, ಹೊಳೆನರಸೀಪುರ ಇವರ ಸಂಯುಕ್ತ ಆಶ್ರಯದಲ್ಲಿ ನಾಟಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಾಹಿತಿ ಬೇಲೂರು ಕೃಷಮೂರ್ತಿ ವಿರಚಿತ ತ್ಯಾಗಿ ಸಾಮಾಜಿಕ ನಾಟಕ ಪ್ರದರ್ಶನ ಮಾ. 8ರಂದು ಶುಕ್ರವಾರ ಸಂಜೆ 6.30ಕ್ಕೆ ಕಟ್ಟೆಬೆಳಗುಲಿ ಗ್ರಾಮ ಪಂಚಾಯತಿ ಆವರಣದಲ್ಲಿ ಏರ್ಪಡಿಸಲಾಗಿದೆ.
ಹೊಳೆನರಸೀಪುರ ತಹಸೀಲ್ದಾರ್ ಈಶ್ವರಪ್ಪ ಉದ್ಘಾಟಿಸುವರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಅಧ್ಯಕ್ಷತೆ ವಹಿಸುವರು. ನಾಟಕ ಅಕಾಡಮಿ ರಿಜಿಸ್ಟ್ರಾರ್ ನರಸಿಂಹಮೂರ್ತಿ ಸಮಾರೋಪ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡುವರು. ಎನ್.ಆರ್.ಶಿವರಾಮು ಉಪನ್ಯಾಸ ನೀಡುವರು.