ಮನೆ ಬೀಗ ಮುರಿದು, ಚಿನ್ನ ಕಳವು
ಚನ್ನರಾಯಪಟ್ಟಣ: ಪಟ್ಟಣದ ನಾಗಸಮುದ್ರ ರಸ್ತೆಯಲ್ಲಿ ಕಳ್ಳರ ತಂಡ ಮನೆಯೊಂದರ ಬೀಗ ಮುರಿದು, ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ನಾಗಸಮುದ್ರ ರಸ್ತೆಯ ನಾಗರಾಜು ಎಂಬುವರ ಮನೆಯ ಬಾಗಿಲು ಮುರಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಒಂದು ಜೊತೆ ಓಲೆ ಹಾಗೂ ಬೆಳ್ಳಿ ಒಡವೆಗಳನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಸೀಲಿಸಿದರು.
ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.