ವಿದ್ಯಾರ್ಥಿನಿಯರಿಗೆ ಮಳೆ ಕೊಯ್ಲು ವೀಕ್ಷಣೆ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರನ್ನು ಗಣಕಯಂತ್ರ ವಿಭಾಗ ಮತ್ತು ಜಲ ಅಭಿವೃದ್ಧಿ ಇಲಾಖೆ ಹಾಸನ ಇವರ ಸಹಯೋಗದೊಂದಿಗೆ ಮಳೆ ಕೊಯ್ಲ ವೀಕ್ಷಣೆಗಾಗಿ ಹಾಸನ ತಾ. ಶಾಂತಿಗ್ರಾಮ ಹೋಬಳಿಯ ಸಾಯಿರಾಮ ಪುರ ಹಳ್ಳಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಬಿದ್ದ ಮಳೆ ನೀರು ಪೋಲಾಗದಂತೆ ನಿರ್ಮಿಸಿದ್ದ 8 ರಿಂದ 10-12 ತರಹದ ಕೃಷಿ ಹೊಂಡ ಹಾಗೂ ಮಣಿನ ದಿಬ್ಬಗಳನ್ನು ವೀಕ್ಷಿಸಲಾಯಿತು. ಮಳೆ ಕೊಯ್ಲಿನಿಂದ ಆಗುವ ನೀರಿನ ಸಂಗ್ರಹಣೆ ಮತ್ತು ಅದರಿಂದ ಆಗುವ ಉಪಯೋಗಗಳನ್ನು ತಿಳಿಸಿಕೊಡಲಾಯಿತು.