ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಕಲಗೂಡು ಪಪಂಗೆ ಹೆಚ್ಚು, ನಗರಸಭೆಗೆ ಕಡಿಮೆ ಮತ

Rashmi Kasaragodu
Updated On : 8 Mar 2013, 11:35 am

ಕನ್ನಡಪ್ರಭ ವಾರ್ತ್ಣೆ ಹಾಸನ  ಮಾ. 8
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ 177 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 1,03,921 ಪುರುಷರು, 1,03, 464 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,07,385 ಮತದಾರರು ಇದ್ದಾರೆ. ಈ ಪೈಕಿ ಚುನಾವಣೆಯಲ್ಲಿ 76,184 ಪುರುಷರು, 74,675 ಮಹಿಳೆಯರು ಸೇರಿದಂತೆ ಒಟ್ಟು  150859  ಮತದಾರರು   ಮತ ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಅರಕಲಗೂಡು ತಾಲೂಕು ಅತಿ ಹೆಚ್ಚು ಎಂದರೆ ಶೇ. 85.75 ರಷ್ಟು ಮತದಾನವಾದರೆ, ಅತಿ ಕಡಿಮೆ ಎಂದರೆ  ಹಾಸನ ನಗರಸಭೆಗೆ ಶೇ. 67.55 ರಷ್ಟು ಮತದಾನವಾಗಿದೆ.  ಜಿಲ್ಲೆಯಲ್ಲಿ  ಸಕಲೇಶಪುರ ಹಾಗೂ  ಬೇಲೂರು ಪುರಸಭೆಯಲ್ಲಿ ಅತಿ ಹೆಚ್ಚಾಗಿ ಮಹಿಳೆಯರು  ಮತ ಚಲಾಯಿಸಿದ್ದಾರೆ.
ತಾಲೂಕುವಾರು ವಿವರ
ಹಾಸನ ನಗರಸಭೆ  35 ವಾರ್ಡ್‌ಗಳಲ್ಲಿ  43,262 ಪುರುಷರು, 43337 ಮಹಿಳೆಯರು ಸೇರಿದಂತೆ  86,5599 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  29, 301 ಪುರುಷರು,  29, 197  ಮಹಿಳೆಯರು ಸೇರಿದಂತೆ  ಒಟ್ಟು 58,498 ಮತದಾರರು ಮತ ಚಲಾಯಿಸಿದ್ದು,  ಶೇ. 67.55  ಮತದಾನವಾಗಿದೆ.
ಅರಸೀಕೆರೆ ಪುರಸಭೆ   27 ವಾರ್ಡ್‌ಗಳಲ್ಲಿ  15813 ಪುರುಷರು, 16084 ಮಹಿಳೆಯರು ಸೇರಿದಂತೆ 31,897ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  11810 ಪುರುಷರು,  11571  ಮಹಿಳೆಯರು ಸೇರಿದಂತೆ  ಒಟ್ಟು 23,381 ಮತದಾರರು ಮತ ಚಲಾಯಿಸಿದ್ದು,  ಶೇ. 73.30  ಮತದಾನವಾಗಿದೆ.
ಚನ್ನರಾಯಪಟ್ಟಣ ಪುರಸಭೆ  23 ವಾರ್ಡ್‌ಗಳಲ್ಲಿ  12,291ಪುರುಷರು, 11,725 ಮಹಿಳೆಯರು ಸೇರಿದಂತೆ  24,016 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  9,322 ಪುರುಷರು,  8,492  ಮಹಿಳೆಯರು ಸೇರಿದಂತೆ  ಒಟ್ಟು 17,814 ಮತದಾರರು ಮತ ಚಲಾಯಿಸಿದ್ದು,  ಶೇ. 74.18  ಮತದಾನವಾಗಿದೆ.
ಹೊಳೆನರಸೀಪುರ ಪುರಸಭೆ  23 ವಾರ್ಡ್‌ಗಳಲ್ಲಿ  10,095 ಪುರುಷರು, 10,130 ಮಹಿಳೆಯರು ಸೇರಿದಂತೆ  20,225 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  7,590 ಪುರುಷರು,  7,484 ಮಹಿಳೆಯರು ಸೇರಿದಂತೆ  ಒಟ್ಟು 15,074 ಮತದಾರರು ಮತ ಚಲಾಯಿಸಿದ್ದು,  ಶೇ.74.53  ಮತದಾನವಾಗಿದೆ.
ಸಕಲೇಶಪುರ ಪುರಸಭೆ  23 ವಾರ್ಡ್‌ಗಳಲ್ಲಿ 7,585 ಪುರುಷರು, 7,659 ಮಹಿಳೆಯರು ಸೇರಿದಂತೆ  15,244 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  5,844 ಪುರುಷರು,  5,932  ಮಹಿಳೆಯರು ಸೇರಿದಂತೆ  ಒಟ್ಟು 11,776 ಮತದಾರರು ಮತ ಚಲಾಯಿಸಿದ್ದು,  ಶೇ. 77.25  ಮತದಾನವಾಗಿದೆ.
ಬೇಲೂರು ಪುರಸಭೆ  23 ವಾರ್ಡ್‌ಗಳಲ್ಲಿ  7,361 ಪುರುಷರು, 7,358 ಮಹಿಳೆಯರು ಸೇರಿದಂತೆ  14,719 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  5,788 ಪುರುಷರು,  5,800  ಮಹಿಳೆಯರು ಸೇರಿದಂತೆ  ಒಟ್ಟು 11,588 ಮತದಾರರು ಮತ ಚಲಾಯಿಸಿದ್ದು,  ಶೇ. 78.73  ಮತದಾನವಾಗಿದೆ.
ಅರಕಲಗೂಡು ಪಟ್ಟಣ ಪಂಚಾಯ್ತಿ 15 ವಾರ್ಡ್‌ಗಳಲ್ಲಿ  5,521 ಪುರುಷರು, 5,179 ಮಹಿಳೆಯರು ಸೇರಿದಂತೆ  10,700 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  4,816 ಪುರುಷರು,  4,495 ಮಹಿಳೆಯರು ಸೇರಿದಂತೆ  ಒಟ್ಟು 9,311 ಮತದಾರರು ಮತ ಚಲಾಯಿಸಿದ್ದು,  ಶೇ.87.02  ಮತದಾನವಾಗಿದೆ.
ಆಲೂರು ಪಟ್ಟಣ ಪಂಚಾಯ್ತಿ 11 ವಾರ್ಡ್‌ಗಳಲ್ಲಿ  1,993 ಪುರುಷರು, 1,992 ಮಹಿಳೆಯರು ಸೇರಿದಂತೆ  3,985 ಮತದಾರರು ಇದ್ದು, ಈ ಪೈಕಿ ಚುನಾವಣೆಯಲ್ಲಿ  1,713 ಪುರುಷರು,  1,704  ಮಹಿಳೆಯರು ಸೇರಿದಂತೆ  ಒಟ್ಟು  3,417 ಮತದಾರರು ಮತ ಚಲಾಯಿಸಿದ್ದು,  ಶೇ.85.75  ಮತದಾನವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement