ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್: ಆಯುಷ್ ಉಚಿತ ಚಿಕಿತ್ಸಾ ಶಿಬಿರ

Rashmi Kasaragodu
Updated On : 8 Mar 2013, 11:40 am


ಕನ್ನಡಪ್ರಭ ವಾರ್ತೆ  ಜಾವಗಲ್  ಮಾ.8
ಯುನಾನಿ ವೈದ್ಯ ಪದ್ದತಿ ನಾನಾ ಚಿಕಿತ್ಸೆಗಳ ಭಂಡಾರವಾಗಿದ್ದು, ಮಾನಸಿಕ ದೈಹಿಕ ಹಾಗೂ ಆಧ್ಯಾತ್ಮಿಕವಾಗಿ ರೋಗಿಗಳ ಮನಸ್ಥಿತಿ ಮತ್ತು ರೋಗವನ್ನು ಗುಣಪಡಿಸುತ್ತದೆಂದು ಆಯುಷ್ ವೈದ್ಯ ಡಾ.ರವೀಂದ್ರ ತಿಳಿಸಿದರು.
 ಜಿಪಂ ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಆಯುಷ್ ಉಚಿತ ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.  ಡಾ.ಮಹಮದ್ ಅದೀಬುಲ್ಲಾ ಮಾತನಾಡಿ ಆಯುಷ್ ಪದ್ದತಿಯಲ್ಲಿ ಆಯುರ್ವೇದ, ಯುನಾನಿ, ಯೋಗ, ಸಿದ್ದಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಪದ್ದತಿಗಳಿವೆ. ಪಂಚಕರ್ಮ ಆಯುರ್ವೇದ ಪದ್ದತಿಯ ಪ್ರಧಾನ ಚಿಕಿತ್ಸೆಯಾಗಿದೆ ಎಂದು ತಿಳಿಸಿದರು.
 ಆಯುಷ್ ವೈದ್ಯಾಧಿಕಾರಿ ಡಾ. ಅಶೋಕ್‌ಕುಮಾರ್, ಡಾ. ಅನುಪಮಾ, ಡಾ.ಗೀತಾ, ಡಾ.ಮಂಗಳಾಸಿಂಗ್ ಮಾತನಾಡಿದರು. ಡಾ.ಪ್ರೇಮಾನಂದ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ಡಾ.ಗಿರೀಶ್, ಡಾ.ಜ್ಞಾನೇಶ್ ಎಲ್.ಎಚ್.ವಿ ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement