ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಣೆ
ಕಪ್ರ ವಾರ್ತೆ ಹಾಸನ ಮಾ. 8
ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಶಾಖೆಯಿಂದ ನಗರದ ಸರ್ಕಾರಿ ವಾಣಿ ವಿಲಾಸ ಶಾಲೆಯಲ್ಲಿ 1 ರಿಂದ10ನೇ ತರಗತಿಯ ಹೆಚ್ಚು ಅಂಕಗಳಿಸಿದ ಪ್ರತಿಭಾವಂತರಿಗೆ ವಿದ್ಯಾರ್ಥಿನಿಯರಿಗೆ ಬ್ಯಾಗ್, ಪುಸ್ತಕ, ಬಟ್ಟೆ ವಿತರಿಸಲಾಯಿತು.10 ಪ್ರತಿಭಾವಂತ ಹೆಣು ಮಕ್ಕಳನ್ನು ಗುರುತಿಸಿ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಬಿಇಓ ಡಿ.ಟಿ.ಪುಟ್ಟರಾಜು ಮಾತನಾಡಿ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಶಾಖೆಯಿಂದ ಹೆಣು ಮಕ್ಕಳು ಓದಲು ಉತ್ತೇಜನ ನೀಡುವುದಕ್ಕಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಶ್ಲಾಘಿಸಿದರು.
ಶಾಖೆ ವ್ಯವಸ್ಥಾಪಕ ಶಿವಾನಂದ್ ಹಿರೇಮಠ್ ಮಾತನಾಡಿ, ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬ್ಯಾಂಕ್ ಮುಖ್ಯ ಕಚೇರಿ ಆದೇಶದಂತೆ ಬ್ಯಾಗ್, ಪುಸ್ತಕ, ಬಟ್ಟೆ ಸೇರಿದಂತೆ ಶಾಲಾ ಸಾಮಾಗ್ರಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಮಕ್ಕಳು ಮುಖ್ಯವಾಗಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ತಮ್ಮ ಗುರಿಯನ್ನು ಮುಟ್ಟುವಂತೆ ಸಲಹೆ ನೀಡಿದರು. ಉಪ ವ್ಯವಸ್ಥಾಪಕ ಕೇಶವಮೂರ್ತಿ ಇದ್ದಾರೆ.