ಹಾಸನ

ಪತಿಯಿಂದಲೇ ಪತ್ನಿ ಹತ್ಯೆ

ಕನ್ನಡಪ್ರಭವಾರ್ತೆ ್ಣ ಹೊಳೆನರಸೀಪುರ ್ಣ ಮಾ 9
ಕ್ಷುಲ್ಲಕ ಕಾರಣಕ್ಕಾಗಿ ಪತಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.ಗಾಂಧಿನಗರದ ಜಬೀನಾ (30) ಸಾವನ್ನಪ್ಪಿದ ಮಹಿಳೆ. ಪಟ್ಟಣದ ಸೈಯದ್ ಹುಸೇನ್ ನೊಂದಿಗೆ ಜಬೀನಾಳ ವಿವಾಹವಾಗಿದ್ದು, ಮೂರು ಮಕ್ಕಳಿವೆ. ಆದರೆ ಸೈಯದ್ ಪತ್ನಿಯನ್ನು ಬಿಟ್ಟು 2ನೇ ವಿವಾಹವಾಗಿ ಬೀರವಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾನೆ. ಸುಮಾರು ಒಂದು ತಿಂಗಳ ಹಿಂದೆ ಜಬೀನಾಳ ಮನೆಗೆ ಬಂದ ಸೈಯದ್ ಜಗಳ ತೆಗೆದು ಮಾತಿಗೆ ಮಾತು ಬೆಳೆದು ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ಇದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆಕೆಗೆ ತಲೆನೋವು ಹೆಚ್ಚಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜಬೀನಾ ಸಾವನ್ನಪ್ಪಿದ್ದಾರೆ. ಮೃತರ ದೊಡ್ಡಪ್ಪ ದಸ್ತಗೀರ್ ಸಾಬ್ ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದೇವಿಗೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಹಾಸನ: ನಗರದ ದೇವಿಗೆರೆಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಶನಿವಾರ ಪತ್ತೆಯಾಗಿದೆ. ನಗರದ ಕಟ್ಟಿನಕೆರೆಯಲ್ಲಿ ಕೂಲಿ ಮಾಡಿಕೊಂಡಿದ್ದ ಲೋಕೇಶ್ ಎಂದು ಗುರುತಿಸಲಾಗಿದೆ. ಈತ ಅತಿಯಾಗಿ ಪಾನಮತ್ತದಿಂದ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕಾಫಿ ಲಿಂಕ್ಸ್ ಅಂಗಡಿಯಲ್ಲಿ ಕಳವು
ಸಕಲೇಶಪುರ: ಕಾಫಿ ಲಿಂಕ್ಸ್ ಅಂಗಡಿಯಲ್ಲಿ ಕಳವಾಗಿರುವ ಘಟನೆ ಬಾಳ್ಳುಪೇಟೆಯಲ್ಲಿ ನಡೆದಿದೆ.ತಾಲೂಕಿನ ಬೆಳಗೋಡು ಹೋಬಳಿ, ಬಾಳ್ಳುಪೇಟೆಯಲ್ಲಿ ಕೆ. ಹೋಸಕೋಟೆ ರಸ್ತೆಯಲ್ಲಿರುವ ದೇವರಾಜ್‌ರ  ಕಾಫಿ ಲಿಂಕ್ಸ್ ಅಂಗಡಿ ಹಿಂಭಾಗದ ಕಿಟಕಿಯನ್ನು ಕಳ್ಳರು ಮುರಿದು ಒಳಪ್ರವೇಶಿಸಿ 1,16,000 ರು.ಬೆಲೆ ಬಾಳುವ 7,000 ರು. ಬೆಲೆಯ ಮಾಯಿಚ್ಯರ್ ಮೋಟಾರ್, 6 ಸಾವಿರ  ನಗದು ಸೇರಿದಂತೆ 90,000 ರು. ಬೆಲೆ ಬಾಳುವ 3 ಕ್ವಿಂಟಾಲ್ ಮೆಣಸು ಮತ್ತು  13 ಸಾವಿರ ರು. ಬೆಲೆಯ 1 ಕ್ವಿಂ. ಕಾಫಿ ಬೀಜ ಕಳುವಾಗಿದೆ.ಆರ್.ಎಲ್. ದೇವರಾಜು ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು,  ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ: ಬಂಧನ
ಬೇಲೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಬಂಧಿಸಿರುವ ಘಟನೆ ಬಾಣಾವರದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಬೈರಾಂಬೂದಿ ಗ್ರಾಮದ ನವೀನ ರವರ ಅಂಗಡಿ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಬಾಣಾವರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಸ್ಥಳದಲ್ಲಿದ್ದ ಸುಮಾರು 1540 ರು. ಬೆಲೆಯ  ವಿಸ್ಕಿ ಪ್ಯಾಕೆಟ್ ವಶಪಡಿಸಿಕೊಂಡಿದ್ದಾರೆ.  ಆರೋಪಿ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿದ್ದಾರೆ.
ಇಬ್ಬರು ಜೂಜುಕೋರರ ಬಂಧನ
ಹಾಸನ: ನಗರದ ಸಂತೇಪೇಟೆ ಗೊರೂರು ರಸ್ತೆ ಪಂಪ್‌ಹೌಸ್ ಮುಂಭಾಗ ಕ್ಯಾಂಟರ್‌ಗೂಡ್ಸ್ ವಾಹನದಲ್ಲಿ ಕಾನೂನು ಬಾಹಿರವಾಗಿ ಜೂಜಾಟ ಆಡುತ್ತಿದ್ದ ಇಬ್ಬರರನ್ನು ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ವಿಜಯನಗರ ಬಡಾವಣೆಯ ಶೇಖರ (33), ಹನುಮಂತಪುರ ಗ್ರಾಮದ ರವಿ  (38) ಎಂಬವರೇ  ಬಂಧಿತ ಜೂಜುಕೋರರು. ಪಣಕ್ಕಿಟ್ಟಿದ್ದ ಸುಮಾರು 2715 ರು.  ಬೆಲೆಯ ನಗದನ್ನು ವಶಪಡಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮದ್ಯ ಸಾಗಣೆ: ಇಬ್ಬರ ಬಂಧನ
ಅರಸೀಕೆರೆ: ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು  ಪೊಲೀಸರು ಬಂಧಿಸಿರುವ ಘಟನೆ  ತಾಲೂಕಿನ ಗಂಡಸಿ  ಹೋಬಳಿಯ  ನಾಗರಹಟ್ಟಿ ಕಟ್ಟೆ ಬಳಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ದೊಡ್ಡಮತಿಘಟ್ಟದ ಪಾಲಾಕ್ಷ (22) ಹಾಗೂ ಗಂಡಸಿ ಗಕ್ರಾಮದ  ಪುನೀತ (23) ಎಂಬವರೇ  ಬಂಧಿತ ಆರೋಪಿಗಳು. ಇವರು ಹಾಸನ-ತಿಪಟೂರು ರಸ್ತೆ ನಾಗರಹಳ್ಳಿ ಕಟ್ಟೆ ಹತ್ತಿರ ಅಕ್ರಮವಾಗಿ ಮದ್ಯವನ್ನು ಟಿವಿಎಸ್‌ನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ  ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ 6256 ರು.  ಬೆಲೆಯ ಮದ್ಯದ 108 ಪ್ಯಾಕೇಟ್‌ಗಳು ವಶಪಡಿಸಿಕೊಂಡಿರುವ ಗಂಡಸಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಹನ ಕಳ್ಳರಿಬ್ಬರ ಬಂಧನ
ಚನ್ನರಾಯಪಟ್ಟಣ: ಇಬ್ಬರು ವಾಹನ ಕಳ್ಳರನ್ನು ಶ್ರವಣಬೆಳಗೊಳ ಪೊಲೀಸರು ಬಂಧಿಸಿ ಅವರಿಂದ 6 ಲಕ್ಷ ರು. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ರಾಜಾಪುರ ಗ್ರಾಮದ ಮಂಜುನಾಥ, ನಾಗಯ್ಯನಕೊಪ್ಪಲು ಗ್ರಾಮದ ಕೃಷ್ಣ ಸೆರೆಸಿಕ್ಕವರು. ಸಿಪಿಐಮಾರಪ್ಪ ಚನ್ನರಾಯಪಟ್ಟಣದಿಂದ ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ರಾಚೇನಹಳ್ಳಿ ಗೇಟ್‌ಬಳಿ ಟಾಟಾ ಎಸ್ಟಿಮೋ ತಳ್ಳಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಮ್ಮ ವಾಹನ ಕಂಡು ಕಾರನ್ನು ಅಲ್ಲಿಯೇ ಬಿಟ್ಟು ಓಡುತ್ತಿದ್ದ ಸಂದರ್ಭದಲ್ಲಿ ಕಳ್ಳರನ್ನು ಬೆನ್ನಟ್ಟಿದಾಗ ಮಂಜುನಾಥ್ ಹಾಗೂ ಕೃಷ್ಣ ಸಿಕ್ಕಿಬಿದ್ದರು. ಬಂಧಿತರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಬೆಂಗಳೂರಿನ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಮಾರುತಿ ಒಮ್ನಿ, ಮಾರುತಿ 800 ಹಾಗೂ ಟಾಟಾ ಕಾರುಗಳ ಕಳವು ಹಾಗೂ ನೆಲಮಂಗಲ ವ್ಯಾಪ್ತಿಯಲ್ಲಿ ಎರಡು ಆಟೋ ಹಾಗೂ ಮಾದಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳವು ಮಾಡಿದ್ದಾಗಿ ವಿಚಾರಣೆಯಲ್ಲಿ ತಿಳಿಯಿತು ಎಂದು ಸಿಪಿಐ ಮಾರಪ್ಪ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!