ಪರಿಸರ ಸಂರಕ್ಷಣೆ ಮಾಹಿತಿ ಶಿಬಿರ
ಕ.ಪ್ರ. ವಾರ್ತೆ ್ಣ ಆಲೂರು, ್ಣ ಮಾ 9
ಪರಿಸರವನ್ನು ಜಾಗ್ರತೆಯಿಂದ ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಪ್ರಾಕೃತಿಕ ಸಂಪನ್ಮೂಲಗಳಿಲ್ಲದ ಕೂಪಕ್ಕೆ ತಳ್ಳಿದಂತಾಗುತ್ತದೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಎಚ್ಚರಿಸಿದರು.
ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ತಾ. ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕಾನೂನು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನೋಟರಿ ವಕೀಲ ಕೆ.ನಾಗರಾಜು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಮೂಲ ಭೂತ ಕರ್ತವ್ಯವಾಗಿದೆ ಎಂದು ತಿಳಿಸಿದರು.ಉಪನ್ಯಾಸ ನೀಡಿದ ವಕೀಲ ಆರ್.ಬಿ.ಸುರೇಶ್ ಅವರು, ಅಪ್ಪಿಕೋ ಚಳವಳಿಯಂತಹ ಸಂಘಟಿತ ಹೋರಾಟ ಸಂಸ್ಥೆಗಳು ಪರಿಸರ ಸಂರಕ್ಷಣೆಗೆ ಹೋರಾಡುತ್ತಿವೆ ಎಂದರು. ಮುಖ್ಯ ಶಿಕ್ಷಕಿ ಸರೋಜಾಬಾಯಿ ಅಧ್ಯಕ್ಷತೆ ವಹಿಸಿದ್ದರು.