ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬುಸ್ತೇನಹಳ್ಳಿಯಲ್ಲಿ ಮಹಾ ಶಿವರಾತ್ರಿ

Rashmi Kasaragodu
Updated On : 9 Mar 2013, 11:37 am

ಹಾಸನ: ತಾಲೂಕಿನ ಬುಸ್ತೇನಹಳ್ಳಿಯ ಬ್ರಹ್ಮಲಿಂಗೇಶ್ವರಸ್ವಾಮಿ ಸೇವಾ ಸಮಿತಿಯಿಂದ ಬ್ರಹ್ಮಲಿಂಗೇಶ್ವರಸ್ವಾಮಿ ದೇವಾ ಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ  ಮಾ. 10 ರಂದು  ಸ್ವಾಮಿಯವರಿಗೆ ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನಡೆಯಲಿದೆ.
  ಮಾ.11 ರಂದು  ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ದೇವರಿಗೆ ಹರಕೆ, ಕಾಣಿಕೆ, ದವಸ ಇತ್ಯಾದಿ ನೀಡುವವರು ದೇವಾಲಯ ಮುಂಭಾಗದಲ್ಲಿ  ಏರ್ಪಡಿಸಿರುವ ಸ್ಥಳದಲ್ಲಿ ನೀಡಿ ರಶೀತಿ ಪಡೆಯಲು ಕೋರಲಾಗಿದೆ.
  ಬೂವನಹಳ್ಳಿ, ಬುಸ್ತೇನಹಳ್ಳಿ, ಹುಲ್ಲೇನಹಳ್ಳಿ,  ಬೊಮ್ಮೇನಹಳ್ಳಿ, ದೇವಿಹಳ್ಳಿ, ಹಳೇಕೊಪ್ಪಲು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು  ಭಾಗವಹಿಸಬೇಕಾಗಿ ಕೋರಲಾಗಿದೆ.ಹೆಚ್ಚಿನ ವಿವರಗಳಿಗೆ ಮೊ. 9448220438 ಅಥವಾ  9980740765 ಸಂಪರ್ಕಿಸಬಹುದು.
'ಆರ್ಯುವೇದ ಉತ್ತಮ ಪರಿಹಾರ'
ಸಕಲೇಶಪುರ: ದೀರ್ಘ ಕಾಲದ ಖಾಯಿಲೆಗಳಿಗೆ ಆಯುರ್ವೇದ ಔಷಧ ಉತ್ತಮ ಪರಿಹಾರ ಎಂದು ಡಾ.ಕೃಷ್ಣ ಪ್ರಸಾದ್ ಹೇಳಿದ್ದಾರೆ. ತಾಲೂಕಿನ ಹಲಸುಲಿಗೆ ಗ್ರಾಮದ ಸಲಾವುದ್ದಿನ್ ಜಾಮೀಯ ಜುಮ್ಮಾ ಮಸೀದಿ ಆವರಣದಲ್ಲಿ ಜಿಲ್ಲಾ ಆಯಷ್ ಇಲಾಖೆ ಹಮ್ಮಿಕೊಂಡಿದ್ದ ಉಚಿತ ಆಯುಷ್ ಚಿಕಿತ್ಸಾ ಶಿಬಿರದಲ್ಲಿ  ಮಾತನಾಡಿದರು.
 ದೀರ್ಘಕಾಲೀನ ಖಾಯಿಲೆಗಳಾದ ಮಧುಮೇಹ, ಅಸ್ತಮ, ಸಂದಿನೋವು, ಸ್ತ್ರೀರೋಗ ಹಾಗೂ ಚರ್ಮರೋಗದಂತಹ ಖಾಯಿಲೆಗಳಿಗೆ ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪತಿ ಚಿಕಿತ್ಸೆಗಳು ಹೆಚ್ಚು ಪ್ರಸ್ತುತ ಎಂದರು.
  ಯಾವುದೇ ಅಡ್ಡ ಪರಿಣಾಮವಿಲ್ಲದ ಆಯುಷ್ ಚಿಕಿತ್ಸೆಗೆ ಇತ್ತೀಚಿಗೆ ಜನರಲ್ಲಿ ಒಲವು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಉಚಿತ ಆರೋಗ್ಯ ತಪಾಸಣಾ ಶಿಬಿರದ ಲಾಭವನ್ನು ಸುಮಾರು 350 ಜನರು ಪಡೆದರು. ಶಿಬಿರದಲ್ಲಿ 6 ವೈದ್ಯರು ಹಾಗೂ ಇಬ್ಬರು ಸಹಾಯಕರು ಕರ್ತವ್ಯ ನಿರ್ವಹಿಸಿದರು.              
'ವೃತ್ತಿ ಕೌಶಲ್ಯ ಅರಿತು ಸಂದರ್ಶನ ಎದುರಿಸಿ'
ಸಕಲೇಶಪುರ: ವಿದ್ಯಾರ್ಥಿಗಳು ವೃತ್ತಿ ಕೌಶಲ ಮತ್ತು ತಂತ್ರಗಾರಿಕೆ ತಿಳಿದು ಸಂದರ್ಶನ ಎದುರಿಸುವ ಚಾಣಾಕ್ಷತೆ, ಸಂವಹನಶೀಲತೆ ನಡವಳಿಕೆಗಳ ಬಗ್ಗೆ ಅರಿಯಬೇಕಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉಪ ವ್ಯವಸ್ಥಾಪಕ ಶೈಲೇಶ್ ದುಬೆ ಹೇಳಿದರು.
 ಮೈಸೂರು ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಉನ್ನತ ಹುದ್ದೆಗೆ ಸೇರಿ ಹೆತ್ತವರಿಗೆ ಕೀರ್ತಿ ತರಬೇಕು. ವಿದ್ಯಾರ್ಥಿ ಜೀವನ ಬಹುಮುಖ್ಯವಾಗಿದ್ದು ಈ ಕಾಲದಲ್ಲಿ ಯಾವುದೇ ಅನ್ಯ ಮಾರ್ಗಗಳಿಗೆ ಗಮನ ಕೊಡದೆ ಶ್ರದ್ಧೆಯಿಂದ ಅಭ್ಯಸಿಸಿ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.
 ಪದವಿ ನಂತರ ಮುಂದೇನು ಎಂಬ ವಿಷಯದ ಬಗ್ಗೆ ಮೈಸೂರು ವಿವಿ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕುರಿತು ಕೇಂದ್ರದ ಸಹಾಯಕ ಮುಖ್ಯಸ್ಥ ವೆಂಕಟೇಶಪ್ಪ ಮಾತನಾಡಿ ವಿದ್ಯಾರ್ಥಿ ದಿಸೆಯಲ್ಲಿನ ಅಧ್ಯಯನ ಜಾಣ್ಮೆ, ಸಾಮರ್ಥ್ಯಕ್ಕೆ ತಕ್ಕಂತಹ ಹುದ್ದೆ ಆರಿಸಿ ಕೊಳ್ಳುವಿಕೆ, ತಾವು ಬಯಸುವ ವೃತ್ತಿಗೆ ಸೇರಲು ನಡೆಸಬೇಕಾದ ಪೂರ್ವತಯಾರಿ ಹಾಗೂ ಮಾರ್ಗದರ್ಶನದ ಬಗ್ಗೆ ಪಕ್ವತೆ ಹೊಂದಬೇಕು.
  ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ನುಡಿದರು.
 ವಿದ್ಯಾರ್ಥಿ ಮೊದಲು ನಿರ್ಧಿಷ್ಟ ಗುರಿ ಹೊಂದಿರಬೇಕು. ಸಾಹಿತ್ಯ ಪ್ರಪಂಚ ಬಹು ವಿಸ್ತಾರವಾಗಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳ ಬುದ್ಧಿಮಟ್ಟ ಹೆಚ್ಚಿಸುವ ಹಾಗೂ ಪ್ರಬುದ್ಧ ಪುಸ್ತಕಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅವುಗಳನ್ನು ಓದುವ ಜೊತೆಗೆ ಸಾಮಾನ್ಯ ಜ್ಞಾನ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು. ಪ್ರಾಂಶುಪಾಲ ಎಚ್.ಡಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವೃತ್ತಿ ಸಾಹಿತ್ಯದ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement