ಶಿವರಾತ್ರಿ ಪ್ರಯುಕ್ತ ಪ್ರಾಣಿ ವಧೆ ನಿಷೇಧ
ಕ.ಪ್ರ.ವಾರ್ತೆ ಹಾಸನ ಮಾ.9
ಮಹಾಶಿವರಾತ್ರಿ ಹಬ್ಬ ಮಾರ್ಚ್ 10ರಂದು ಜರುಗಲಿದ್ದು ಅಂದು ನಗರದಲ್ಲಿ ಮೀನು, ಕೋಳಿ, ಕುರಿ ಮತ್ತು ಹಂದಿ ಮಾಂಸ ಮಾರಾಟ ಮಾಡುವುದು ಹಾಗೂ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಮಾಂಸಾಹಾರಿ ಹೋಟೆಲ್ಗಳನ್ನು ಮುಚ್ಚಲು ಸೂಚಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿದಲ್ಲಿ ಪುರಸಭೆ ಅಧಿನಿಯಮದ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಗರಸಭೆ ಪೌರಾಯುಕ್ತರು ಎಚ್ಚರಿಸಿದ್ದಾರೆ.