ಅರಸೀಕೆರೆ ಪುರಸಭೆ: ಮತ ಎಣಿಕೆಗೆ ಸಜ್ಜು
ಕನ್ನಡಪ್ರಭ ವಾರ್ತೆ ಅರಸೀಕೆರೆ ಮಾ. 10
ಪುರಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಸೋಮವಾರ ಮಾ.11ರಂದು ಸಂತ ಮೇರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಬೆಳಗ್ಗೆ 8 ಕ್ಕೆ ಆರಂಭವಾಗುವ ಪ್ರಕ್ರಿಯೆ 10 ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಮತ ಎಣಿಕೆಗಾಗಿ 6 ಟೇಬಲ್ಗಳನ್ನು ಹಾಕಲಾಗಿದ್ದು, ಈ ಸಂಬಂಧ 18 ಮಂದಿ ಅಧಿಕಾರಿಗಳನ್ನು ನೇಮಿಸಲಾಗಿದೆ.1 ಬಾರಿಗೆ 2 ವಾರ್ಡ್ಗಳ ಮತ ಎಣಿಕೆ ನಡೆಯಲಿದ್ದು ಒಂದೆರಡು ನಿಮಿಷದಲ್ಲಿ 1 ವಾರ್ಡಿನ ಫಲಿತಾಂಶ ಲಭ್ಯವಾಗಲಿದೆ. ಒಂದರಿಂದ 27 ವಾರ್ಡ್ಗಳ ಫಲಿತಾಂಶ ಆರಂಭಗೊಂಡ ಒಂದೆರಡು ಗಂಟೆಯೊಳಗಾಗಿ ಫಲಿತಾಂಶ ಘೋಷಣೆಯಾಗಲಿದೆ. ಈ ಬಾರಿ ವಿದ್ಯುನ್ಮಾನ ಮತದಾನ ಯಂತ್ರ ಬಳಕೆ ಮಾಡಿರುವುದು ವಿಶೇಷ. ಎಣಿಕಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬಿಗಿ ಪೊಲೀಸ್ಬಂದೋಬಸ್ತ್ ಕಲ್ಪಿಸಲಾಗಿದೆ.