ಎಲ್ಲಾ ಸಾಹಿತ್ಯಕ್ಕೆ ಜಾನಪದ ಬುನಾದಿ: ಸಾಹಿತಿ ಮೇಟಿಕೆರೆ ಹಿರಿಯಣ್ಣ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಮಾ.10
ಜಾನಪದದ ಬೇರಿಲ್ಲದೆ ಯಾವುದೇ ಸಾಹಿತ್ಯ ರಚನೆಯಾಗಲು ಸಾಧ್ಯವಿಲ್ಲ. ಎಲ್ಲಾ ಸಾಹಿತ್ಯಕ್ಕೆ ಜಾನಪದ ಬುನಾದಿಯಾಗಿದೆ ಎಂದು ಸಾಹಿತಿ ಮೇಟಿಕೆರೆ ಹಿರಿಯಣ್ಣ ತಿಳಿಸಿದರು.ಪಟ್ಟಣದ ಹೇಮಾವತಿ ಕಲ್ಯಾಣ ಮಂಟಪದಲ್ಲಿ ಜಾನಪದ ಭೀಷ್ಮ ಮೇಟಿಕೆರೆ ಹಿರಿಯಣ್ಣ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ತಾಲೂಕು ಕಸಾಪ ಏರ್ಪಡಿಸಿದ್ದ ಜಾನಪದ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ರಚನೆ ಸಂದರ್ಭದಲ್ಲಿ ಜಾನಪದ ಸಾಹಿತ್ಯವನ್ನು ಅಳವಡಿಸಿಕೊಂಡೇ ಸಾಹಿತ್ಯ ರಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಜಾನಪದದ ಸೊಗಡು ಹಿಂದೆ ಬಹಳ ಹರಡಿತ್ತು. ಆದರೆ ಇಂದಿನ ಜಾಗತಿಕ ಯುಗದಲ್ಲಿ ಜಾನಪದದ ಸೊಗಡು ಸೊರಗುತ್ತಿದೆ ಎಂದು ವಿಷಾದಿಸಿದ ಅವರು ವಿಶ್ವದ ಹೆಚ್ಚು ಸಾಹಿತ್ಯದಲ್ಲಿ ಜಾನಪದದ ಸೊಗಡು ಹರಡಿಕೊಂಡಿದೆ ಎಂದರು. ಸಾಹಿತಿ ಚಂದ್ರು ಕಾಳೇನಹಳ್ಳಿ, ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್, ಪರಿಸರ ಪ್ರೇಮಿ ಚ.ನಂ ಅಶೋಕ್, ನಿವೃತ್ತ ಉಪನ್ಯಾಸಕ ಸಿದ್ದೇಗೌಡ, ಹೊನ್ನಶೆಟ್ಟಿಹಳ್ಳಿ ಗಿರಿರಾಜು ಇದ್ದರು.