ಪರೀಕ್ಷೆಯಿಂದ ಹಲ್ಲುಗಳ ರಕ್ಷಣೆ: ಡಾ. ಮೂರ್ತಿ
ಹಾಸನ: ಪ್ರತಿಯೊಬ್ಬರೂ ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ತಮ್ಮ ಹಲ್ಲುಗಳನ್ನು ಪರೀಕ್ಷೆ ಮಾಡಿಸಿ ಕೊಳ್ಳುವುದರಿಂದ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹಾಸನಾಂಬ ದಂತ ಆಸ್ಪತ್ರೆ ಮತ್ತು ಕಾಲೇಜಿನ ಡಾ.ನರಸಿಂಹಮೂರ್ತಿ ಸಲಹೆ ನೀಡಿದರು.
ಬಾಲಕಿಯರ ಬಾಲಮಂದಿರದಲ್ಲಿ ಸೇವಾ ಭಾರತಿ ಯೂತ್ ಅರ್ಗೈನೈಸೇಷನ್ ಫಾರ್ ಡೆವಲಪ್ಮೆಂಟ್ ಸಂಸ್ಥೆಯಿಂದ ಏರ್ಪಡಿಸಿದ್ದ ಉಚಿತ ದಂತ ಪರೀಕ್ಷೆ ಮತ್ತು ಚಿಕಿತ್ಸಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಒಂದೇ ರೀತಿಯ ಟೂತ್ಪೇಸ್ಟ್ ಬಳಕೆ ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.