ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭಕ್ತರ ಶಿವ ನಾಮಸ್ಮರಣೆ

Rashmi Kasaragodu
Updated On : 11 Mar 2013, 12:07 pm

ಕ.ಪ್ರ. ವಾರ್ತೆ ್ಣ ಅರಸೀಕೆರೆ ್ಣ ಮಾ.10
ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ನಾನಾ ಶಿವ ದೇವಾಲಯ ಸೇರಿದಂತೆ ನಾನಾ ದೇವಾಲಯಗಳಲ್ಲಿ ಭಾನುವಾರ ಶಿವಭಕ್ತರು ಬೆಳಗಿನಿಂದಲೇ ಉಪವಾಸವ್ರತ ಆಚರಿಸಿ ಶಾಸ್ತ್ರೋಕ್ತವಾಗಿ ಶ್ರದ್ಧಾಭಕ್ತಿಯಿಂದ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ ರಾತ್ರಿಯಿಡಿ ಶಿವನಾಮಸ್ಮರಣೆ, ಶಿವಭಜನೆ, ಶಿವಕೀರ್ತನೆಯಲ್ಲಿ ತಲ್ಲೀನರಾದರು.
ಹೊಯ್ಸಳರ ಕಾಲದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಚಲನಚಿತ್ರ ನಟ ದೊಡ್ಡಣ್ಣ ವಿಶೇಷ ಆಸಕ್ತಿವಹಿಸಿ ಶಿವಾಲಯ ಸಮಿತಿ ಸದಸ್ಯರು ಹಾಗೂ ಚಲನಚಿತ್ರ ಕುಶಲಕರ್ಮಿಗಳೊಂದಿಗೆ ಕಳೆದ 1 ವಾರದಿಂದ ದೇವಾಲಯ ಅಲಂಕರಿಸುವ ಕಾರ್ಯದಲ್ಲಿ ನಿರತರಾಗಿದ್ದರಿಂದ ಇಂದ್ರಲೋಕವೇ ಧರೆಗಿಳಿದಂತೆ ಭಾಸವಾಗಿ ಭಕ್ತರ ಮನಸೂರೆಗೊಳ್ಳುತ್ತಿದೆ.
ಭಕ್ತಿ ಸಮರ್ಪಣೆ, ಕೃತಾರ್ಥತೆ: ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಯಕ್ಷಗಾನದ ದೈತ್ಯ ಗೊಂಬೆಗಳು ನೋಡುಗರನ್ನು ಆಕರ್ಷಿಸುತ್ತಿದ್ದು ಬೆಳಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ಶೃಂಗರಿಸಲಾಗಿದ್ದ ಈಶ್ವರಲಿಂಗದ ದರ್ಶನ ಪಡೆದು ಭಕ್ತಿ ಸಮರ್ಪಿಸಿ ಕೃತಾರ್ಥರಾದರು.
ಮಲ್ಲೇಶ್ವರ ನಗರದ ಬೆಟ್ಟದ ಮೇಲಿರುವ ಮಳೆಮಲ್ಲೇಶ್ವರ ಸ್ವಾಮಿ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ, ಪಂಚಾಮೃತಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗಿನಿಂದಲೇ ಭಕ್ತರು ಸಾಲು ಸಾಲಾಗಿ ಬೆಟ್ಟ ಹತ್ತಿ ದೇವರಿಗೆ ಪೂಜಿಸಿದರು. ರಾತ್ರಿಯಿಡಿ ಭಕ್ತರಿಂದ ಭಜನೆ ನೆರವೇರಿತು. ಸೋಮವಾರ ಬೆಳಗ್ಗೆ ಬೆಟ್ಟದ ಮೇಲೆ ರಥೋತ್ಸವ ನಡೆಯಲಿದೆ.
ಗ್ರಂಥಾಲಯ ರಸ್ತೆಯಲ್ಲಿರುವ ಭವಾನಿಶಂಕರ ದೇವಾಲಯ, ಸುಭಾಷ್ ನಗರದಲ್ಲಿರುವ ಕೆಂಗಲ್ ಸಿದ್ದೇಶ್ವರ ಸ್ವಾಮಿ ದೇವಾಲಯ, ಮಿನಿ ವಿಧಾನಸೌಧದ ಬಳಿಯಿರುವ ಕೆಂಗಲ್ ಬಸವೇಶ್ವರ ಸ್ವಾಮಿ ದೇವಾಲಯ, ರುದ್ರಗುಡಿ ಬೀದಿಯಲ್ಲಿರುವ ವೀರಭದ್ರಸ್ವಾಮಿ ದೇವಾಲಯ, ಮೂರು ಕಳಸದ ಮಠದ ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ದರ್ಶನ ಪಡೆದರು.ಶಿವರಾತ್ರಿ ಅಂಗವಾಗಿ ಬೆಳಗಿನಿಂದ ನಿಷ್ಠೆಯಿಂದ ಉಪವಾಸ ವ್ರತ ಆಚರಿಸಿ ಸಂಜೆ ಶಾಸ್ತ್ರೋಸ್ತ್ರವಾಗಿ ಶಿವ ಪ್ರಜೆ ಸಲ್ಲಿಸಿ ಶಿವನಾಮಸ್ಮರಣೆಯಲ್ಲಿ ಮಹಾಶಿವರಾತ್ರಿ ಆಚರಿಸಿದರು.
ಹಣ್ಣುಗಳ ಬೆಲೆ ಏರಿಕೆ: ಉಪವಾಸ ಶಿವರಾತ್ರಿಯ ಅವಿಭಾಜ್ಯ ಅಂಗ. ಬೆಳಗಿನಿಂದಲೂ ರಾತ್ರಿಯವರೆಗೆ ಉಪವಾಸ ನಡೆಸುವ ಭಕ್ತರು ಈ ಸಮಯದಲ್ಲಿ ಎಳನೀರು, ಹಣ್ಣು ಸೇವಿಸುತ್ತಾರೆ. ಪ್ರತಿವರ್ಷದಂತೆ ಈ ಬಾರಿಯೂ ಎಳನೀರು ಹಾಗೂ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು. ವ್ಯಾಪಾರವು ಜೋರಾಗಿ ಇರುತ್ತದೆ ಎಂಬುದನ್ನು ಮೊದಲೇ ಅಂದಾಜಿಸಿದ್ದ ವ್ಯಾಪಾರಸ್ಥರು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ  ಹೂ ಹಣ್ಣುಗಳನ್ನು ಶೇಖರಣೆ ಮಾಡಿದ್ದರೂ ಬೆಲೆ ಮಾತ್ರ ಗ್ರಾಹಕನ ಕೈಗೆಟುಕುತ್ತಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement