ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ರಸಗ್ರಹಣ ಕಾರ್ಯಕ್ರಮ
ಕ.ಪ್ರ. ವಾರ್ತೆ ಹಾಸನ ಮಾ. 10
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ತಾ. ಅನುಗವಳ್ಳಿ ಗ್ರಾಮದಲ್ಲಿ ನೇತಾಜಿ ಕೈಗಾರಿಕಾ ತರಬೇತಿ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ರಸಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕವಿ ಕಾವ್ಯ ಸಾಹಿತ್ಯ ವಿಷಯವಾಗಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು ಅವರು, ವಿಜ್ಞಾನ ಅರಿಯುವ ಮುನ್ನ ಸಾಹಿತ್ಯವನ್ನರಿ ಎಂಬ ಜಾಣ್ನುಡಿಯಂತೆ ವೈಜ್ಞಾನಿಕ ಬೆಳವಣಿಗೆ ಹಿನ್ನೆಲೆಗೆ ಪ್ರೇರಣೆಯಾಗಿ ಸಾಹಿತ್ಯವು ಸಮಾಜ ಸಂಸ್ಕೃತಿ ಪರಿವರ್ತನೆಗೆ ಅನನ್ಯ ಕಾಣಿಕೆ ನೀಡಿದೆ ಎಂದರು. ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್ ಇಲಾಖೆಯಿಂದ ಕಲಾವಿದರಿಗೆ ಅವ ಕಾಶಗಳ ಬಗ್ಗೆ ಮಾಹಿತಿ ನೀಡಿದರು