ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ನಿರುದ್ಯೋಗದಿಂದ ಪಾರಾಗಲು ವೃತ್ತಿಪರ ತರಬೇತಿ ಅಗತ್ಯ'

Mainashree
Updated On : 12 Mar 2013, 10:04 am

ಅರಸೀಕೆರೆ  ಮಾ. 10
ಶಿಕ್ಷಣದೊಂದಿಗೆ ವೃತ್ತಿಪರ ತರಬೇತಿ ಪಡೆದಲ್ಲಿ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ನಿರುದ್ಯೋಗ ಸಮಸ್ಯೆಯಿಂದ ಪಾರಾಗಲು ಸಾಧ್ಯ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಿ.ಪರಮೇಶ್ ತಿಳಿಸಿದರು. ಹಾರನಹಳ್ಳಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಪ್ರೌಢಶಾಲೆ ನಂತರ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಆಯ್ಕೆ ಬಗ್ಗೆ ಗೊಂದಲ ಮೂಡುವುದು ಸಹಜ. ಗೊಂದಲಕ್ಕೆ ಈಡಾಗದೇ ಅಥವಾ ಪೋಷಕರ ಪ್ರತಿಷ್ಠೆ ಹಾಗೂ ಒತ್ತಾಯಕ್ಕೆ ಒಳಗಾಗದೇ ವೃತ್ತಿಪರ ತರಬೇತಿ ಪಡೆದಲ್ಲಿ ಭವಿಷ್ಯ ಉನ್ನತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement