ಮಾರಕಾಸ್ತ್ರಗಳಿಂದ ಇರಿದು ಮಹಿಳೆ ಕೊಲೆ
ಹುಮನಾಬಾದ್: ಜಮೀನಿಗೆ ತೆರಳುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಮಹಿಳೆಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಮರಕುಂದಾ ಗ್ರಾಮದಲ್ಲಿ ಜರುಗಿದೆ.ಮರಕುಂದಾ ಗ್ರಾಮದ ಮುನ್ನಿಬೇಗಂ ಅಹ್ಮದ್ (50) ಕೊಲೆಯಾದ ಮಹಿಳೆ. ಗ್ರಾಮದಿಂದ ಜಮೀನಿಗೆ ಕಂಟಿಗಳ ದಾರಿಯಲ್ಲಿ ಸಾಗುತ್ತಿರುವಾಗ ನಾಲ್ಕಾರು ಗುಂಪಿನ ಜನರು ಮಹಿಳೆಯನ್ನು ದಾರಿಯಿಂದ ಬೇರೆಡೆಗೆ ಎಳೆದುಕೊಂಡು ಹೊಗಿ, ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮಹಿಳೆಯ ಕಿವಿಯಲ್ಲಿದ್ದ ಬಂಗಾರ ಒಡವೆಗಾಗಿ ಕಿವಿಯನ್ನೇ ಮಾರಕಾಸ್ತ್ರದಿಂದ ಹರಿದು ದೊಚಿದ್ದಾರೆ. ಬೇಮಳಖೇಡಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.