ಸಕಲೇಶಪುರ ಪುರಸಭೆ: ಜೆಡಿಎಸ್ಗೆ ಸ್ಪಷ್ಟ ಬಹುಮತ
ಕ.ಪ್ರ.ವಾರ್ತೆ ಸಕಲೇಶಪುರ ಮಾ. 11
ಪುರಸಭೆ ಅಧಿಕಾರ ಹಿಡಿಯುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿದ್ದು, 11 ಸ್ಥಾನ ಗಳಿಸಿರುವ ಜೆಡಿಎಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ 6, ಕೆಜೆಪಿ 2, ಬಿಜೆಪಿ 2, ಬಂಡಾಯ ಜೆಡಿಎಸ್ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದಾರೆ.
ವಾರ್ಡ್ನಂ 1 ಬಿಜೆಪಿ ಸತ್ಯವತಿ 232 ಮತ ಪಡೆದು ಜಯಗಳಿಸಿದರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಜರೀನಾ 90 ಮತ ಪಡೆದು 142 ಮತಗಳ ಅಂತರದಲ್ಲಿ ಸೋಲು ಒಪ್ಪಿಕೊಂಡಿದ್ದಾರೆ. ವಾರ್ಡ್ನಲ್ಲಿ 538 ಮತದಾರರಿದ್ದು ಚಲಾವಣೆಗೊಂಡ ಮತಗಳ ಸಂಖ್ಯೆ 453.
ವಾರ್ಡ್ ನಂ 2 ರಲ್ಲಿ ಬಿಜೆಪಿ ಎಸ್.ಎ ಮೋಹನ್ 295 ಮತಗಳಿಸಿ ಜಯಶಾಲಿಯಾಗಿದ್ದರೆ, ಸಮೀಪ ಪ್ರತಿಸ್ಪರ್ಧಿ ಜೆಡಿಎಸ್ನ ಬಿ.ಕೆ ಮೋಹನ್ 243 ಮತಗಳಿಸಿದ್ದು 52 ಮತಗಳಿಂದ ಸೋಲು ಒಪ್ಪಿಕೊಂಡಿದ್ದಾರೆ. ಒಟ್ಟು ಮತದಾರರ ಸಂಖ್ಯೆ 665 ಚಲಾವಣೆಗೊಂಡ ಮತಗಳ ಸಂಖ್ಯೆ 546.
3 ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿ ನಿರ್ವಾಣಯ್ಯ 139 ಮತಪಡೆದು ಜಯಶಾಲಿಯಾಗಿದ್ದರೆ, ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಪಿ.ಲೋಕೇಶ್ 70 ಮತಗಳಿಸಿದ್ದು 69 ಮತಗಳಿಂದ ಪರಾಜಯ ಹೊಂದಿದ್ದಾರೆ. ಒಟ್ಟು ಮತಗಳ ಸಂಖ್ಯೆ 404, ಚಲಾವಣೆಗೊಂಡ ಮತಗಳ ಸಂಖ್ಯೆ 323.
4 ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿ ಮುಖೇಶ್ 198 ಮತಗಳಿಸಿ ಗೆದ್ದಿದ್ದರೆ, ಸಮೀಪದ ಪ್ರತಿಸ್ಪರ್ಧಿ ರವಿ 155 ಮತಗಳಿಸಿದ್ದಾರೆ. ಗೆಲುವಿನ ಅಂತರ 43 ಮತಗಳು. ಒಟ್ಟು ಮತಗಳ ಸಂಖ್ಯೆ 646 ಚಲಾವಣೆಗೊಂಡ ಮತಗಳ ಸಂಖ್ಯೆ 518.
5 ನೇವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿ ಎಸ್.ಎಂ ವೆಂಕಟೇಶ್ 234 ಮತ ಪಡೆದರೆ, ಸಮೀಪ ಪ್ರತಿಸ್ಪರ್ಧಿ ಪ್ರಕಾಶ್ 227 ಮತ ಗಳಿಸಿದ್ದಾರೆ.7 ಮತಗಳ ಅಂತರ ಗೆಲುವು ಸಾಧಿಸಿದ್ದಾರೆ. ಒಟ್ಟು ಮತದಾರರ ಸಂಖ್ಯೆ 749 ಚಲಾವಣೆಗೊಂಡ ಮತಗಳ ಸಂಖ್ಯೆ 547.
6 ನೇ ವಾರ್ಡಿನಿಂದ ಜೆಡಿಎಸ್ನ ಸಂತೋಷ್ ಜೈನ್ 201 ಮತಪಡೆದಿದ್ದು, ಪ್ರತಿಸ್ಪರ್ಧಿ ಕೆಜೆಪಿಯ ರವಿಕುಮಾರ್ 117 ಮತಗಳಿಸಿದ್ದಾರೆ. ಗೆಲುವಿನ ಅಂತರ 84 ಮತ. ಒಟ್ಟು ಮತಗಳ ಸಂಖ್ಯೆ 455 ಚಲಾವಣೆಗೊಂಡ ಮತಗಳು 348.
7 ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಕಾಳಿಂಗಪ್ಪ 168 ಮತ ಪಡೆದರೆ, ಪ್ರತಿಸ್ಪರ್ಧಿ ಜೆಡಿಎಸ್ನ ಮಂಜುನಾಥ್ 102 ಮತ ಪಡೆದಿದ್ದು ಗೆಲುವಿನ ಅಂತರ 66 ಮತಗಳು. ಒಟ್ಟು ಮತಗಳ ಸಂಖ್ಯೆ 556 ಚಲಾವಣೆಗೊಂಡ ಮತಗಳ ಸಂಖ್ಯೆ 396.
8 ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಶೋಭಾವತಿ 449 ಮತಗಳಿಸಿ ಜಯಗಳಿಸಿದ್ದಾರೆ. ಜೆಡಿಎಸ್ನ ಯಶೋಧ 230 ಸ್ಥಾನಗಳಿಸಿದ್ದಾರೆ. ಗೆಲುವಿನ ಅಂತರ 219 ಮತಗಳು.ಒಟ್ಟು ಮತಗಳ ಸಂಖ್ಯೆ 1240 ಚಲಾವಣೆಗೊಂಡ ಮತಗಳ ಸಂಖ್ಯೆ 827.
9 ನೇವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಹಫೀಜ್ 548 ಮತಗಳಿಸಿದ್ದರೆ, ಪ್ರತಿಸ್ಪರ್ಧಿ ಜಾಕೀರ್ ಆಹಮ್ಮದ್ 119 ಮತ ಪಡೆದಿದ್ದು 429 ಮತಗಳ ಅಂತರದಲ್ಲಿ ಸಯ್ಯದ್ಹಫೀಜ್ ಜಯ ಗಳಿಸಿದ್ದಾರೆ. ಒಟ್ಟು ಮತದಾರರ 970 ಚಲಾವಣೆಗೊಂಡ ಮತ 779.
10 ನೇ ವಾರ್ಡ್ನಿಂದ ಕಾಂಗ್ರೆಸ್ನ ಪದ್ಮ 216 ಮತಗಳಿಸಿ ಗೆಲುವು ಪಡೆದಿದ್ದಾರೆ. ಪ್ರತಿಸ್ಪರ್ಧಿ ಜೆಡಿಎಸ್ನ ಸೇಲ್ವರೀನ್ ಪರೇರಾ 181 ಮತಗಳಿಸಿದ್ದಾರೆ. ಗೆಲುವಿನ ಅಂತರ 35 ಮತಗಳು. ಒಟ್ಟುಮತದಾರರು 718 ಮತಗಳು. ಮತಗಳ ಸಂಖ್ಯೆ. 543
11 ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿ ತರಕಾರಿ ಸುಮಿತ್ರಾ 188 ಮತಗಳಿಂದ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕೆಜೆಪಿಯ ಸುಮ 142 ಮತಗಳಿಸಿ ಪರಾಜಯ ಹೊಂದಿದ್ದಾರೆ. ಗೆಲುವಿನ ಅಂತರ 46 ಮತಗಳು.ಒಟ್ಟುಮತಗಳ ಸಂಖ್ಯೆ 417. ಚಲಾವಣೆಗೊಂಡ ಮತಗಳ ಸಂಖ್ಯೆ 362.
12 ನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿ ಎಸ್.ಕೆ ಸೂರ್ಯ 292 ಮತಗಳಿಸಿ ವಿಜಯಿಯಾಗಿದ್ದರೆ, ಪ್ರತಿಸ್ಪರ್ಧಿ ಜೆಡಿಎಸ್ನ ಪಲ್ಲವಿ ಪ್ರದೀಪ್ 130 ಮತಗಳಿಸಿದ್ದಾರೆ. ಗೆಲುವಿನ ಅಂತರ 162 ಮತಗಳು.ಒಟ್ಟು ಮತದಾರರ ಸಂಖ್ಯೆ 779 ಚಾಲವಣೆಗೊಂಡ ಮತಗಳ ಸಂಖ್ಯೆ 594.
13 ನೇ ವಾಡಿನಿಂದ ಕೆಜೆಪಿ ಅಭ್ಯರ್ಥಿ ರುದ್ರಕುಮಾರ್ 314 ಮತಗಳಿಸಿ ಗೆಲುವು ಪಡೆದಿದ್ದಾರೆ. ಪ್ರತಿಸ್ಪರ್ಧಿ ಜೆಡಿಎಸ್ನ ಅಕ್ರಂಪಾಷ್ 158 ಮತಗಳಿಸಿದ್ದಾರೆ. ಗೆಲುವಿನ ಅಂತರ 156 ಮತಗಳು.ಒಟ್ಟು ಮತಗಳ ಸಂಖ್ಯೆ 758. ಮತಗಳ ಸಂಖ್ಯೆ 563.
14 ನೇವಾರ್ಡ್ನಿಂದ ಕೆಜೆಪಿ ಅಭ್ಯರ್ಥಿ ರೇಖಾ 449 ಮತಗಳಿಸಿ ಗೆಲುವು ಪಡೆದಿದ್ದರೆ. ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಇ.ಜೆ ಜೆಸ್ಸಿ 182 ಮತಗಳಿಸಿದ್ದಾರೆ. ಗೆಲುವಿನ ಅಂತರ 267 ಮತಗಳು.ಒಟ್ಟು ಮತಗಳ ಸಂಖ್ಯೆ 924. ಚಲಾವಣೆಗೊಂಡ ಮತಗಳ ಸಂಖ್ಯೆ 709.
15 ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿ ಭಾಗ್ಯಮ್ಮ 164 ಮತಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕೆಜೆಪಿಯ ಸುಶೀಲಾ 144 ಮತಗಳಿಸಿದ್ದಾರೆ. ಗೆಲುವಿನ ಅಂತರ 20 ಮತಗಳು.ಒಟ್ಟು ಮತಗಳ ಸಂಖ್ಯೆ 502,ಚಲಾವಣೆಗೊಂಡ ಮತಗಳ ಸಂಖ್ಯೆ 308.
16 ನೇವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿ ಸಮೀರ್ಖಾನ್ 153 ಮತಗಳಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ಕಾರ್ ಮಲ್ಲೇಶ್ 112 ಮತಗಳಿಸಿದ್ದಾರೆ.ಗೆಲುವಿನ ಅಂತರ 41 ಮತಗಳು.ಒಟ್ಟುಮತಗಳ ಸಂಖ್ಯೆ 492.ಚಲಾವಣೆಗೊಂಡ ಮತಗಳ ಸಂಖ್ಯೆ 376.
17 ನೇವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿ ಎಸ್.ಎ ಸತೀಶ್ 214 ಮತಗಳಿಸಿ ವಿಜಯಿಯಾಗಿದ್ದಾರೆ, ಪ್ರತಿಸ್ಪರ್ಧಿ ಕಾಂಗ್ರೆಸ್ನ ಈಶ್ವರ್ 89 ಮತಗಳಿಸಿದ್ದಾರೆ. ಗೆಲುವಿನ ಅಂತರ 125 ಮತಗಳು. ಒಟ್ಟುಮತಗಳ ಸಂಖ್ಯೆ 443 ಚಲಾವಣೆಗೊಂಡ ಮತಗಳ ಸಂಖ್ಯೆ 350.
18 ನೇವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿ ಎಸ್.ಎಂ ಗಿರೀಶ್ 206 ಮತಗಳಿಸಿ ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಸಂತೋಷ್ 182 ಮತಗಳಿಸಿದ್ದಾರೆ.ಗೆಲುವಿನ ಅಂತರ 24 ಮತಗಳು.ಒಟ್ಟುಮತಗಳ ಸಂಖ್ಯೆ 573.ಚಲಾವಣೆಗೊಂಡ ಮತಗಳ ಸಂಖ್ಯೆ 492.
19 ನೇ ವಾರ್ಡಿನಿಂದ ಜೆಡಿಎಸ್ನ ಲಲಿತಮ್ಮ 235 ಮತಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ನ ನಿರ್ಮಲಾ ಪವಿತ್ರನ್ 151 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 84 ಮತಗಳು.ಒಟ್ಟುಮತಗಳ ಸಂಖ್ಯೆ 527 ಚಲಾವಣೆಗೊಂಡ ಮತಗಳ ಸಂಖ್ಯೆ 396.
20 ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿ ತಾಜ್ಉನ್ನೀಸ್ 185 ಮತ ಪಡೆದು ಜಯಗಳಿಸಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಗಾಯಿತ್ರಿ ಕಿರಣ್ 174 ಮತಗಳಿಸಿದ್ದಾರೆ. ಗೆಲುವಿನ ಅಂತರ 11 ಮತಗಳು.ಒಟ್ಟುಮತಗಳ ಸಂಖ್ಯೆ 652 ಮತಗಳು.ಚಲಾವಣೆಗೊಂಡ ಮತಗಳ ಸಂಖ್ಯೆ 471.
21 ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಜೆ.ಬಿ ಡೀಸೋಜಾ 346 ಮತ ಪಡೆದು ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಮಂಜುನಾಥ್ 229 ಮತಪಡೆದಿದ್ದಾರೆ. ಗೆಲುವಿನ ಅಂತರ 117 ಮತಗಳು.ಒಟ್ಟುಮತಗಳ ಸಂಖ್ಯೆ 984 ಚಲಾವಣೆಗೊಂಡ ಮತಗಳ ಸಂಖ್ಯೆ 786.
22 ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿ ಪುಷ್ಪಾವತಿ 353 ಮತಗಳಿಸಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ನ ಶೀಲಾ ಅನಂತಕುಮಾರ್ 211 ಮತಪಡೆದಿದ್ದಾರೆ. ಗೆಲುವಿನ ಅಂತರ 142 ಮತಗಳು.ಒಟ್ಟುಮತಗಳ ಸಂಖ್ಯೆ 702. ಚಲಾವಣೆಗೊಂಡ ಮತಗಳ ಸಂಖ್ಯೆ 604.
23 ನೇ ವಾರ್ಡಿನಿಂದ ಜೆಡಿಎಸ್ನ ಉಮೇಶ್ 308 ಮತಗಳಿಸಿ ಜಯಭೇರಿ ಬಾರಿಸಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ನ ಇಸ್ಮಾಯಿಲ್ 156 ಮತಗಳಿಸಿದ್ದಾರೆ. ಗೆಲುವಿನ ಅಂತರ 156 ಮತಗಳು.