ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಜಿಲ್ಲಾದ್ಯಂತ 17,744 ಪರೀಕ್ಷಾರ್ಥಿಗಳು
ಪ್ರಥಮ ಪರೀಕ್ಷಾರ್ಥಿಗಳಲ್ಲಿ ಬಾಲಕಿಯರೇ ಹೆಚ್ಚು ಟಿ 36 ಪರೀಕ್ಷಾ ಕೇಂದ್ರಗಳಲ್ಲಿ 28ರವರೆಗೆ ಪರೀಕ್ಷೆ
ಕನ್ನಡಪ್ರಭ ವಾರ್ತೆ ಹಾಸನ ಮಾ, 12
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.13 ರಿಂದ ಪ್ರಾರಂಭವಾಗಲಿದ್ದು, ಮಾ.28 ರವರೆಗೆ ಜಿಲ್ಲೆಯ ಒಟ್ಟು 36 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.
8 ತಾಲೂಕುಗಳಿಂದ ಒಟ್ಟು 17,744 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅವರಲ್ಲಿ 6,108 ಬಾಲಕರು, 8,250 ಬಾಲಕಿಯರು ಸೇರಿದಂತೆ ಒಟ್ಟು 14,358 ಮಂದಿ ಇದೇ ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಂಡಿದ್ದು 2302 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 1084 ಮಂದಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಒಟ್ಟು 17,744 ವಿದ್ಯಾರ್ಥಿಗಳಲ್ಲಿ 8732 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ, 4676 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಹಾಗೂ 4336 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ತಾಲೂಕುವಾರು ವಿವರ ಹೀಗಿದೆ.
ಹಾಸನ ತಾಲೂಕು: 12 ಪರೀಕ್ಷಾ ಕೇಂದ್ರಗಳಲ್ಲಿ 2097 ಬಾಲಕರು, 3019 ಬಾಲಕಿಯರು ಸೇರಿದಂತೆ ಒಟ್ಟು 5116 ಮಂದಿ ವಿದ್ಯಾರ್ಥಿಗಳು.
ಆಲೂರು ತಾಲೂಕು: 2 ಪರೀಕ್ಷಾ ಕೇಂದ್ರಗಳಲ್ಲಿ 316 ಬಾಲಕರು, 375 ಬಾಲಕಿಯರು ಸೇರಿದಂತೆ ಒಟ್ಟು 691 ವಿದ್ಯಾರ್ಥಿಗಳು.
ಹೊಳೆನರಸೀಪುರ ತಾಲೂಕು: 3 ಪರೀಕ್ಷಾ ಕೇಂದ್ರಗಳಲ್ಲಿ 432 ಬಾಲಕರು, 556 ಬಾಲಕಿಯರು ಸೇರಿದಂತೆ ಒಟ್ಟು 988 ವಿದ್ಯಾರ್ಥಿಗಳು.
ಸಕಲೇಶಪುರ ತಾಲೂಕು: 1 ಪರೀಕ್ಷಾ ಕೇಂದ್ರದಲ್ಲಿ 215 ಬಾಲಕರು, 335 ಬಾಲಕಿಯರು ಸೇರಿದಂತೆ ಒಟ್ಟು 550 ವಿದ್ಯಾರ್ಥಿಗಳು.
ಅರಕಲಗೂಡು ತಾಲೂಕು: 4 ಪರೀಕ್ಷಾ ಕೇಂದ್ರಗಳಲ್ಲಿ 598 ಬಾಲಕರು, 862 ಬಾಲಕಿಯರು ಸೇರಿದಂತೆ ಒಟ್ಟು 1460 ವಿದ್ಯಾರ್ಥಿಗಳು.
ಬೇಲೂರು ತಾಲೂಕು: 3 ಪರೀಕ್ಷಾ ಕೇಂದ್ರಗಳಲ್ಲಿ 607 ಬಾಲಕರು, 808 ಬಾಲಕಿಯರು ಸೇರಿದಂತೆ ಒಟ್ಟು 1415 ವಿದ್ಯಾರ್ಥಿಗಳು.
ಚನ್ನರಾಯಪಟ್ಟಣ ತಾಲೂಕು: 4 ಪರೀಕ್ಷಾ ಕೇಂದ್ರಗಳಲ್ಲಿ 792 ಬಾಲಕರು, 970 ಬಾಲಕಿಯರು ಸೇರಿದಂತೆ ಒಟ್ಟು 1762 ವಿದ್ಯಾರ್ಥಿಗಳು.
ಅರಸೀಕೆರೆ ತಾಲೂಕು: 7 ಪರೀಕ್ಷಾ ಕೇಂದ್ರಗಳಲ್ಲಿ 1051 ಬಾಲಕರು, 1325 ಬಾಲಕಿಯರು ಸೇರಿದಂತೆ ಒಟ್ಟು 2376 ವಿದ್ಯಾರ್ಥಿಗಳು.
ಜಿಲ್ಲೆಯ 3 ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇಲ್ಲಿ ವಿಶೇಷ ನಿಗಾ ಇರಿಸಲು ಪದವಿ ಪೂರ್ವ ನಿರ್ದೇಶನಾಲಯದಿಂದ ವಿಶೇಷ ತಂಡ ನಿಯೋಜಿಸಲಾಗಿದೆ. ಈ ತಂಡ ಪರೀಕ್ಷಾ ಪ್ರಾರಂಭದಿಂದ ಮುಗಿಯುವವರೆಗೆ ಪರೀಕ್ಷಾ ಕೇಂದ್ರದಲ್ಲೇ ಇದ್ದು ಗಮನ ಹರಿಸಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ರಾಜಮ್ಮ ಮತ್ತು ಪರೀಕ್ಷಾ ಚಟುವಟಿಕೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಪ್ರಾಂಶುಪಾಲ ಸುರೇಶ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು?
ಹಾಸನ ನಗರ ಕೇಂದ್ರಗಳು: ಎಂ. ಕೃಷ್ಣ ಪದವಿ ಪೂರ್ವ ಕಾಲೇಜು, ಶ್ರೀ ವೆಂಕಟೇಶ್ವರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸಂತೆಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ವಿಭಜಿತ ಬಾಲಕಿಯರ ಪದವಿ ಪೂರ್ವ ಕಾಲೇಜು, ಯು.ಇ.ಎಸ್ ಪದವಿಪೂರ್ವ ಕಾಲೇಜು, ಪಿ ಅಂಡ್ ಟಿ ಕಾಲೋನಿ, ಸಾಲಗಾಮೆ ರಸ್ತೆ, ಸೆಂಟ್ ಜೋಸೆಫ್, ಸಂಯುಕ್ತ ಪದವಿ ಪೂರ್ವ ಕಾಲೇಜು, ಸೆಂಟ್ ಫಿಲೋಮಿನಾ ಬಾಲಕಿಯರ ಪದವಿ ಪೂರ್ವ ಕಾಲೇಜು, ವಾಣಿ ವಿಲಾಸ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಚಿಪ್ಪಿನಕಟ್ಟೆ.
ಅರಸೀಕೆರೆ ತಾಲೂಕು ಕೇಂದ್ರಗಳು: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಿ.ಎಚ್. ರಸ್ತೆ; ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತೆ ಮೈದಾನ; ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ದೊಡ್ಡಮೇಟಿ ಕುರ್ಕೆ; ಸರ್ಕಾರಿ ಪದವಿಪೂರ್ವ ಕಾಲೇಜು, ಜಾವಗಲ್; ಪ್ರತಿಭಾ ಪದವಿ ಪೂರ್ವ ಕಾಲೇಜು, ಜಗದ್ಗುರು ಕೋಡಿಮಠ ಪದವಿ ಪೂರ್ವ ಕಾಲೇಜು.
ಬೇಲೂರು ತಾಲೂಕು ಕೇಂದ್ರಗಳು: ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾಂತಲಾ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಹಳೇಬೀಡು.
ಸಕಲೇಶಪುರ ತಾಲೂಕು ಕೇಂದ್ರಗಳು: ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಎಂ.ರಸ್ತೆ.
ಚನ್ನರಾಯಪಟ್ಟಣ ತಾಲೂಕು ಕೇಂದ್ರಗಳು: ನವೋದಯ ಪದವಿ ಪೂರ್ವ ಕಾಲೇಜು, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಹಿರಿಸಾವೆ; ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚನ್ನರಾಯಪಟ್ಟಣ.
ಹೊಳೆನರಸೀಪುರ ತಾಲೂಕು ಕೇಂದ್ರಗಳು: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ನೂತನ ಪದವಿ ಪೂರ್ವ ಕಾಲೇಜು.
ಅರಕಲಗೂಡು ತಾಲೂಕು ಕೇಂದ್ರಗಳು: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಣನೂರು; ಸರ್ಕಾರಿ ಎಚ್.ಎಂ.ಎಸ್ ಪದವಿಪೂರ್ವ ಕಾಲೇಜು, ಬಸವಾಪಟ್ಟಣ.
ಆಲೂರು ತಾಲೂಕು ಕೇಂದ್ರಗಳು: ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂವಂ ಕಾಲೇಜು.