ಕಿಡಿಗೇಡಿಗಳ ಬೆಂಕಿಗೆ ಸುಟ್ಟುಹೋದ ಕಾರುಗಳು
ಕ.ಪ್ರ. ವಾರ್ತೆ ಹಾಸನ ಮಾ. 12
ಎರಡು ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಗರದ ಪೆನ್ಷನ್ ಮೊಹಲ್ಲಾದಲ್ಲಿ ಮಂಗಳವಾರ ನಡೆದಿದೆ.
ಕಿಡಿಗೇಡಿಗಳ ಈ ಕೃತ್ಯದಿಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಎಂಬವರಿಗೆ ಸೇರಿದ ಸ್ಯಾಂಟ್ರೋ ಕಾರು ಭಾಗಶಃ ಸುಟ್ಟು ಕರಕಲಾಗಿದೆ. ಮತ್ತೊಂದು ಕಾರು ಖಾಲಿದ್ ಎಂಬವರಿಗೆ ಸೇರಿದ್ದು, ಕಾರಿನ ಮುಂಭಾಗಕ್ಕೆ ಬೆಂಕಿ ಬಿದ್ದು, ಮುಂಭಾಗ ಸುಟ್ಟು ಹೋಗಿದೆ.
ಈ ಘಟನೆಯೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ನಡೆದಿದ್ದು, ಠಾಣೆಯಲ್ಲಿದ್ದ ಪೊಲೀಸರು ಕಾರಿಗೆ ಬೆಂಕಿ ಬಿದ್ದಿದ್ದ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಈ ಸಂಬಂಧ ಕಾರಿನ ಮಾಲೀಕರು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.