ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೇಲೂರು ರಸ್ತೆ ಅಭಿವೃದ್ಧಿಗೆ 12.5 ಕೋಟಿ: ರುದ್ರೇಶಗೌಡ

Mainashree
Updated On : 13 Mar 2013, 12:04 pm

ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಮಾ.12
ಬೇಲೂರು ಕ್ಷೇತ್ರಕ್ಕೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 30 ಕಿಮೀ ರಸ್ತೆ ಅಭಿವೃದ್ಧಿಗೆ 12.5 ಕೋಟಿ  ಮಂಜೂರಾಗಿದೆ ಎಂದು ಶಾಸಕ ರುದ್ರೇಶಗೌಡ ತಿಳಿಸಿದರು.
ಇತ್ತೀಚೆಗೆ ಜಾವಗಲ್ ಸಮೀಪದ ಹಿರೇಹಳ್ಳಿ ಗ್ರಾಮದಲ್ಲಿ ಜಾವಗಲ್ ಹಾರನಹಳ್ಳಿ ರಸ್ತೆಯಿಂದ ಹಿರೇಹಳ್ಳಿ ಮಾರ್ಗವಾಗಿ ಜಾವಗಲ್ ಯಲಗುಂದ ರಸ್ತೆಗೆ ಸೇರುವ 2 ಕಿ.ಮೀ ರಸ್ತೆ ಅಬಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಹಳ್ಳಿಗಳ ರಸ್ತೆಗಳನ್ನು ಮುಖ್ಯ ರಸ್ತೆಗೆ ಸಂಪರ್ಕಿಸುವ ಕಾಮಗಾರಿ ಕೈಗೊಳ್ಳುವುದರಿಂದ ಗ್ರಾಮೀಣ ಜನರ ದೈನಂದಿನ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ ಎಂದರು.
ಈ ಕಾಮಗಾರಿಗೆ 88 ಲಕ್ಷ ತಗುಲುತ್ತಿದ್ದು ಗ್ರಾಮಸ್ಥರು ಸಹಕರಿಸಬೇಕೆಂದು ತಿಳಿಸಿದರು.
ಜಿಪಂ ಸದಸ್ಯ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಳ್ಳಿ ನಾಗರಾಜು, ಎಇಇ ಹೇಮಂತಕುಮಾರ್ ಹೋಬಳಿ ಬಿಜೆಪಿ ಅಧ್ಯಕ್ಷ ರೇಣುಕಾಪ್ರಸಾದ್,  ರೈತ ಮೋರ್ಚಾ ಕಾರ್ಯದರ್ಶಿ  ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಯಶೋಧರ ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement