ಮತದಾರರಿಗೆ ಜಗನ್ನಾಥ್ ಅಭಿನಂದನೆ
ಕನ್ನಡಪ್ರಭ ವಾರ್ತೆ ಹಾಸನ ಮಾ. 12
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಅಭ್ಯರ್ಥಿಗಳ ಜಯಕ್ಕೆ ಕಾರಣವಾಗಿದ್ದು, ಜಿಲ್ಲಾ ವಕ್ತಾರ ಬಿ.ಎ.ಜಗನ್ನಾಥ್ ಧನ್ಯವಾದ ಸಲ್ಲಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ ಬಾರಿ ಗೆದ್ದಿದ್ದ 33 ಸ್ಥಾನಗಳಿಂದ ಈ ಬಾರಿ 55 ಸ್ಥಾನಗಳಿಗೆ ಏರಿಕೆ ಆಗಿದ್ದು, 8 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಆದರೆ ಜೆಡಿಎಸ್‌ಗೆ 126 ಸ್ಥಾನಗಳಿಂದ 90 ಸ್ಥಾನಗಳಿಗೆ ಇಳಿಕೆ ಕಂಡಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅಲ್ಪ ಸ್ವಲ್ಪ ಟಿಕೆಟ್ ಹಂಚಿಕೆಯ ಗೊಂದಲವಾಗದಿದ್ದರೆ ಎಲ್ಲಾ ಮುಖಂಡರನ್ನು ಬಳಸಿಕೊಂಡು ಸಾಮೂಹಿಕ ನಾಯಕ್ವದಲ್ಲಿ ಚುನಾವಣೆ ಎದುರಿಸಿದ್ದರೆ ನಮ್ಮ ಸಕಲೇಶಪುರ ಕಾರ್ಯಕ್ಷೇತ್ರದಲ್ಲಿ ಪುರಸಭೆಯ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂದರು. ಗ್ರಾಮೀಣ ಪ್ರದೇಶದಲ್ಲಿ ಕೇಂದ್ರಸರ್ಕಾರವು ರೈತ ಸಮುದಾಯಕ್ಕೆ ನೀಡಿರುವ ಯೋಜನೆಗಳ್ನು ಪಕ್ಷದ ಕಾರ್ಯಕರ್ತರು ಮತದಾರರಿಗೆ ಮನದಟ್ಟು ಮಾಡಿಕೊಡುತ್ತಿರುವುದಾಗಿ ಹೇಳಿದರು.