ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆಯರಿಗೆ ಕಾನೂನಿನ ಅರಿವು ಅತ್ಯಗತ್ಯ'

Mainashree
Updated On : 13 Mar 2013, 12:05 pm

ರಾಮನಾಥಪುರ: ಮಹಿಳೆಯರು ಹಕ್ಕುಗಳನ್ನು ಪಡೆಯಲು ಕಾನೂನಿನ ಅರಿವು ಹೊಂದಿರುವುದು ಸೂಕ್ತ ಎಂದು ಅರಕಲಗೂಡು  ಜೆಎಂಎಫ್‌ಸಿ ವ್ಯವಹಾರ ನ್ಯಾಯಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಬಿ. ವೆಂಕಟಪ್ಪ ತಿಳಿಸಿದರು.
ಕೊಣನೂರು ಹೋಬಳಿ ಮರಿಯನಗರ ದೇವಾಲಯ ಅವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಲು ಕಾನೂನಿನ ಅರಿವು ಪಡೆದುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆದು ವ್ಯಾಜ್ಯ ಬಗೆಹರಿಸುವ ಪ್ರಯತ್ನವನ್ನು ನ್ಯಾಯಾಂಗ ಇಲಾಖೆ ಮಾಡುತ್ತಿದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಂಪನೂಲ ವ್ಯಕ್ತಿ ಹಾಗೂ ವಕೀಲೆ ಕು. ಸೌಮ್ಯ ಮಾತನಾಡಿದರು. ಫಾದರ್ ಡೇವಿಡ್ ಅಂತೋನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ರಾಜೇಶ್, ಸದಸ್ಯ ವಿಜಯಕುಮಾರ್, ನಂಜುಡೇಗೌಡ, ಎ.ಎಚ್. ರವಿ. ಮಾತನಾಡಿದರು.
ಅರಕಲಗೂಡು ಪಿಎಸ್‌ಐ ಭರತ್, ಕೊಣನೂರು ಠಾಣೆ ಎಸ್.ಐ. ರಾಜು ಇತರರು ಇದ್ದರು. ಮಂಜುಳ ಸ್ವಾಗತಿಸಿದರು. ಜಾನಕಿರಾಣಿ  ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement