ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಹಿಳೆಯರು ಹವ್ಯಾಸಕ್ಕೆ ಸಮಯ ಮೀಸಲಿಡಬೇಕು'

Mainashree
Updated On : 13 Mar 2013, 12:04 pm

ಹಾಸನ: ಮಹಿಳೆಯರು ಉತ್ತಮ ಹವ್ಯಾಸಕ್ಕಾಗಿ ಕೆಲ ಸಮಯ ಮೀಸಲಿಡುವಂತೆ ಜಿಟಿವಿ ಮತ್ತು ಈಟಿವಿ ವಾಹಿನಿ ನಿರ್ಮಾಪಕಿ ಹಾಗೂ ನಿರ್ದೇಶಕಿ ಪ್ರತಿಭಾ ಪಟವರ್ಧನ್ ಸಲಹೆ ನೀಡಿದರು.
ಹೇಮಾವತಿ ನಗರದ ಎಲೈಟ್ ಶಾಲೆ ಮಾಳವಿಕ ಸ್ಕೂಲ್ ಸಭಾಂಗಣದಲ್ಲಿ ಹೇಮಾವತಿ ಮಹಿಳಾ ಸಂಘ, ಕೆಸಿಪಿ ವಿದ್ಯಾಸಂಸ್ಥೆ, ಎಲೈಟ್‌ಶಾಲೆ ಯಿಂದ ಏರ್ಪಡಿಸಲಾಗಿದ್ದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳೆಯರ ಆರೋಗ್ಯ ಕುರಿತು ಸಂವಾದ, ಆಟೋಟ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಕೇವಲ ಅಡುಗೆ ಮನೆ ಮತ್ತು ಮಕ್ಕಳ ಪೋಷಣೆಗೆ ಸೀಮಿತವಾಗದೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕು. ಪ್ರಸ್ತುತದಲ್ಲಿ ಮಹಿಳೆ ಪುರುಷರಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಪ್ರತಿ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.
ಗಣಪತಿ ಸೇವಾ ಸಮಿತಿ ಮತ್ತು ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ. ಎಚ್. ನಾಗರಾಜ್, ಪ್ರಸೂತಿ ತಜ್ಞೆ ಡಾ. ಎ.ಸಾವಿತ್ರಿ, ಡಾ.ವಿನಯರಘು, ಕೆಂಪು ಚೆಲುವಾಜಮ್ಮಣ್ಣಿ, ಲೀಲಾವತಿ, ಎಲೈಟ್ ಶಾಲೆ ಪ್ರಾಂಶುಪಾಲರಾದ ಎಚ್.ಆರ್. ಲತಾ, ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಶರ್ಮಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement