ರಸ್ತೆ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ಜಾವಗಲ್ ಮಾ. 12
ಹೋಬಳಿಯಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆಗೆ ಮುಂದಾಗಬೇಕೆಂದು ಶಾಸಕ ರುದ್ರೇಶಗೌಡ ಹೇಳಿದರು. ಸಮೀಪದ ಚಿಕ್ಕಜ್ಜಿಕಟ್ಟೆಹಳ್ಳಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೋಬಳಿಯ 10 ಕಿ.ಮೀ ರಸ್ತೆ ಅಭಿವೃದ್ಧಿಗೆ 2.72 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದರು.
ಚಿಕ್ಕಜ್ಜಿಕಟ್ಟೆಹಳ್ಳಿಯಿಂದ ಸಖರಾಯಪಟ್ಟಣ ರಸ್ತೆ ಅಭಿವೃದ್ಧಿಗೆ 46 ಲಕ್ಷ ರು. ಬಿಡುಗಡೆಯಾಗಿದ್ದು ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಸುವಂತೆ ಗ್ರಾಮಸ್ಥರಿಗೆ ತಿಳಿಸಿರು. ಜಿಪಂ ಸದಸ್ಯ ಲಕ್ಷ್ಮಣ್, ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ್, ಬಸವರಾಜಪ್ಪ ಎಇಇ ಹೇಮಂತಕುಮಾರ್,ಧರ್ಮಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಮಹದೇವಪ್ಪ ಮಹದೇವಪ್ಪ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಶಿವಾನಂದ್ ಸದಸ್ಯ ಪುಟ್ಟಸ್ವಾಮಿ ಚಿಕ್ಕೇಗೌಡ, ಪಿಡಿಓ ಬಸವರಾಜು, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಾಲಿಂಗಪ್ಪ ಹೋಬಳಿ ಬಿಜೆಪಿ ಅಧ್ಯಕ್ಷ ರೇಣುಕಾಪ್ರಸಾದ್ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಯಶೋಧರ ಕುಮಾರ್, ಎಂಜಿನಿಯರ್ ಅಶ್ವತ್ಥನಾರಾಯಣ ಇದ್ದರು.ಕನ್ನಡಪ್ರಭ ವಾರ್ತೆ ಜಾವಗಲ್ ಮಾ. 12
ಹೋಬಳಿಯಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆಗೆ ಮುಂದಾಗಬೇಕೆಂದು ಶಾಸಕ ರುದ್ರೇಶಗೌಡ ಹೇಳಿದರು. ಸಮೀಪದ ಚಿಕ್ಕಜ್ಜಿಕಟ್ಟೆಹಳ್ಳಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೋಬಳಿಯ 10 ಕಿ.ಮೀ ರಸ್ತೆ ಅಭಿವೃದ್ಧಿಗೆ 2.72 ಕೋಟಿ ರು. ಮಂಜೂರು ಮಾಡಿಸಲಾಗಿದೆ ಎಂದರು.
ಚಿಕ್ಕಜ್ಜಿಕಟ್ಟೆಹಳ್ಳಿಯಿಂದ ಸಖರಾಯಪಟ್ಟಣ ರಸ್ತೆ ಅಭಿವೃದ್ಧಿಗೆ 46 ಲಕ್ಷ ರು. ಬಿಡುಗಡೆಯಾಗಿದ್ದು ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಸುವಂತೆ ಗ್ರಾಮಸ್ಥರಿಗೆ ತಿಳಿಸಿರು. ಜಿಪಂ ಸದಸ್ಯ ಲಕ್ಷ್ಮಣ್, ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ್, ಬಸವರಾಜಪ್ಪ ಎಇಇ ಹೇಮಂತಕುಮಾರ್,ಧರ್ಮಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಮಹದೇವಪ್ಪ ಮಹದೇವಪ್ಪ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಶಿವಾನಂದ್ ಸದಸ್ಯ ಪುಟ್ಟಸ್ವಾಮಿ ಚಿಕ್ಕೇಗೌಡ, ಪಿಡಿಓ ಬಸವರಾಜು, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಾಲಿಂಗಪ್ಪ ಹೋಬಳಿ ಬಿಜೆಪಿ ಅಧ್ಯಕ್ಷ ರೇಣುಕಾಪ್ರಸಾದ್ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಯಶೋಧರ ಕುಮಾರ್, ಎಂಜಿನಿಯರ್ ಅಶ್ವತ್ಥನಾರಾಯಣ ಇದ್ದರು.