'ಸುವರ್ಣ ಯೋಜನೆಗೆ ಸೂರನಾಯಕನಹಳ್ಳಿ, ಹಿರೇಹಳ್ಳಿ ಸೇರ್ಪಡೆ'
ಕನ್ನಡಪ್ರಭ ವಾರ್ತೆ ್ಣ ಜಾವಗಲ್ ್ಣ ಮಾ. 12
ಸೂರನಾಯಕನಹಳ್ಳಿ ಮತ್ತು ಹಿರೇಹಳ್ಳಿ ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಿರುವುದಾಗಿ ಶಾಸಕ ರುದ್ರೇಶಗೌಡ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಜಾವಗಲ್ ಸಮೀಪದ ಸೂರನಾಯಕನಹಳ್ಳಿ ಗ್ರಾಮದಲ್ಲಿ 40 ಲಕ್ಷ ವೆಚ್ಚದಲ್ಲಿ 1.6 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶೀಘ್ರವೇ ಕೊಳವೆ ಬಾವಿ ಕೊರೆಸುವುದಾಗಿ ತಿಳಿಸಿದರು.
ಜಿಪಂ ಸದಸ್ಯ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಳ್ಳಿನಾಗರಾಜು, ಎಇಇ ಹೇಮಂತಕುಮಾರ್ ಮಾತನಾಡಿದರು.
ತಾಪಂ ಮಾಜಿ ಸದಸ್ಯ ಪಂಚಾಕ್ಷರಪ್ಪ, ಹೋಬಳಿ ಬಿಜೆಪಿ ಅಧ್ಯಕ್ಷ ರೇಣುಕಾಪ್ರಸಾದ್, ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಯಶೋಧರ ಕುಮಾರ್, ಎಂಜಿನಿಯರ್ ಅಶ್ವತ್ಥನಾರಾಯಣ ಲಕ್ಷ್ಮೀಶ್, ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಜಿಲ್ಲಾ ಸೇವಾದಳ ಅಧ್ಯಕ್ಷ ಶ್ರೀಕಂಠಯ್ಯ , ರಾಜಶೇಖರ್, ಮಾಜಿ ಉಪ ಪ್ರಧಾನ ಕೈಲಾಸ ಕುಮಾರ ಇದ್ದರು.
ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ, ಜಿಲ್ಲಾ ಸೇವಾದಳ ಅಧ್ಯಕ್ಷ ಶ್ರೀಕಂಠಯ್ಯ, ಮಾಜಿ ಉಪ ಪ್ರಧಾನ ಕೈಲಾಸ ಕುಮಾರ, ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ನಿಂಗಪ್ಪ, ಕೆಂಪಣ್ಣ ಗುತ್ತಿಗೆರಾದ ಪ್ರಭಾಕರ ರಮೇಶ್ ಇದ್ದರು.