14ಕ್ಕೆ ಹೆತ್ತೂರಿನಲ್ಲಿ ಸಭೆ
ಸಕಲೇಶಪುರ: ಪಶ್ಚಿಮಘಟ್ಟದ ಅಂಚಿನಲ್ಲಿರುವ ಗ್ರಾಮಗಳ ಸಮಸ್ಯೆ ಹಾಗೂ ಪರಿಹಾರ ಕಂಡು ಹಿಡಿಯುವ ಬಗ್ಗೆ ಚರ್ಚಿಸಲು ತಾಲೂಕಿನ ಹೆತ್ತೂರು ಗ್ರಾಮದ ಸೋಮಮ್ಮ ಸುಬ್ಬೇಗೌಡ ಕಲ್ಯಾಣ ಮಂಟಪದಲ್ಲಿ ಮಾ.14ರಂದು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಂತಳ್ಳಿ ತಿಮ್ಮೇಗೌಡ ತಿಳಿಸಿದ್ದಾರೆ. ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಹಳ್ಳಿಗಳು ಮೂಲಭೂತ ಸೌಕರ್ಯಗಳಿಲ್ಲದೆ ನಲುಗಿವೆ. ಇದರಿಂದಾಗಿ ಯುವ ಸಮೂಹ ಪಟ್ಟಣ ಸೇರುತ್ತಿದೆ. ನೆಲ, ಜಲ ಸಂರಕ್ಷಣೆಯ ವಿಚಾರವಾಗಿ ಚರ್ಚಿಸಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಪರಿಸರವಾದಿಗಳು ಹಾಗೂ ಬುದ್ಧಿಜೀವಿಗಳು ಸೇರಿ ಚರ್ಚಿಸಲಾಗುತ್ತಿದೆ. ಈ ಸಭೆಗೆ ಜನರು ಆಗಮಿಸಿ ಸಲಹೆ ಸೂಚನೆ ನೀಡ ಬೇಂದು ತಿಳಿಸಿದ್ದಾರೆ.