ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗಷ್ಟೇ ಸೀಮಿತವಲ್ಲ
ಕ.ಪ್ರ.ವಾರ್ತೆ ಅರಸೀಕೆರೆ ಮಾ. 13
ಅರ್ಥಶಾಸ್ತ್ರ ಕೇವಲ ಆ ವಿಭಾಗದ ವಿದ್ಯಾರ್ಥಿಳಿಗಷ್ಟೇ ಸೀಮಿತವಲ್ಲ. ಎಲ್ಲರೂ ಅದರ ಮಹತ್ವ ತಿಳಿದುಕೊಂಡಾಗ ಮಾತ್ರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಿಕೊಳ್ಳಲು ಸಾಧ್ಯ ಎಂದು ಚನ್ನರಾಯಪಟ್ಟಣ ಸ.ಪ್ರ.ದ. ಕಾಲೇಜು ಅರ್ಥಶಾಸ್ತ್ರದ ಪ್ರಾಧ್ಯಾಪಕ ಡಾ. ನೇ.ತಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ತಾಲೂಕಿನ ಗಂಡಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಆರ್ಥಿಕ ಭದ್ರತೆಗೆ ಬುನಾದಿ ಒದಗಿಸಬೇಕಾದರೆ ಅರ್ಥಶಾಸ್ತ್ರದ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೆ ಅಗತ್ಯವೆಂದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಉಮಾನಾಥ್ ವಹಿಸಿದ್ದರೆ ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಎಚ್.ಎನ್. ಬಸವರಾಜ್ ಅವರು ಸ್ವಾಗತಿಸಿ, ಪ್ರೇಮಕುಮಾರ್ ಬಿ. ವಂದಿಸಿದರು.
ಇದೇ ವೇಳೆ ತೃತೀಯ ಬಿ.ಎ. ವಿದ್ಯಾರ್ಥಿನಿ ರೂಪ ಆಯ-ವ್ಯಯ ಬಗ್ಗೆ ವಿಶ್ಲೇಷಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಸೌಮ್ಯ ನಿರೂಪಿಸಿದರು.