ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಹಾಬೌದ್ಧ ದೀಕ್ಷಾ ಭಾಷಣ' ಕೃತಿ ಬಿಡುಗಡೆ

Rashmi Kasaragodu
Updated On : 13 Mar 2013, 11:07 am

ಕನ್ನಡಪ್ರಭ ವಾರ್ತ್ಣೆ ಹಾಸನ ್ಣ ಮಾ. 13
ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಎವಿಕೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಬಿ.ಎಸ್. ದೇವರಾಜು ಅವರು ಅನುವಾದಿಸಿರುವ 'ಮಹಾ ಬೌದ್ಧ ದೀಕ್ಷಾ ಭಾಷಣ' ಕೃತಿ ಬಿಡುಗಡೆ ಕಾರ್ಯಕ್ರಮ ಮಾ.17ರಂದು ನಗರದ ಕಸಾಪ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಕೊಳ್ಳೇಗಾಲದ ಮನೋರಖಿತ ಭಂತೇಜಿ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂರಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ವಹಿಸಲಿದ್ದಾರೆ. ಖ್ಯಾತ ಸಾಹಿತಿ ತುಮಕೂರಿನ ನಟರಾಜ್ ಬುದಾಳು ಕೃತಿ ಕುರಿತು ಮಾತನಾಡಲಿದ್ದು, ಕೃತಿಕಾರರಾದ ಬಿ.ಎಸ್. ದೇವರಾಜು ಹಾಗೂ ವಿವಿಧ ಸಂಘಟನೆಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ಬಾಬಾ ಸಾಹೇಬ್ ಅಂಬೇಡ್ಕರ್ ನಾಗ್ಪುರದಲ್ಲಿ ಮಾಡಿದ ಭಾಷಣವನ್ನು ಬಿ.ಎಸ್. ದೇವರಾಜು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೊಳೆನರಸೀಪುರದ ಜಾಗೃತಿ ಯುವ ಕಲಾ ಸಂಘದಿಂದ ಬುದ್ಧ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement