ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು

Rashmi Kasaragodu
Updated On : 13 Mar 2013, 11:07 am

ಬೇಲೂರ: ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮಾನ ಉಳಿಸಿಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶ ಕಂಡಿದ್ದರೆ, ಕಾಂಗ್ರೆಸ್ ಇಷ್ಟು ಬಂದಿದ್ದೇ ಕಷ್ಟದಲ್ಲಿ ಎಂದು ನಿಟ್ಟುಸಿರು ಬಿಡುತ್ತಿದ್ದು, ಬಿಜೆಪಿ, ಕೆಜೆಪಿ, ಖಾತೆ ತೆರೆಯದೆ ಸೋಲಿಗೆ ಕಾರಣ ಹುಡುಕುತ್ತಿದೆ.
ಪಟ್ಟಣದ 23 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, 14719 ಜನ ಮತದಾರರಿದ್ದು ಪುರುಷರು 7360, ಮಹಿಳೆಯರು 7358 ಮತದಾರರಿದ್ದು ಇವರಲ್ಲಿ ಪುರುಷರು 5788, ಮಹಿಳೆಯರು 5800 ಮಂದಿ ಮತಚಲಾಯಿಸಿದರು. ಪುರಸಭೆ ಚುನಾವಣೆಯಲ್ಲಿ ಇತಿಹಾಸ ಎಂಬಂತೆ 90 ಮಂದಿ ಕಣದಲ್ಲಿದ್ದು, ವಾರ್ಡಿಗೆ 4 ರಿದ 5 ಮಂದಿ ಅಭ್ಯರ್ಥಿಗಳು ಇದ್ದರು. ಚುನಾವಣೆ ಹಿಂದಿನ ರಾತ್ರಿವರೆಗೂ ತಮ್ಮ ಸಂಪೂರ್ಣ ತನು ಮನ ಧನವನ್ನು ವಿನಿಯೋಗಿಸಿ ಮತದಾರರ ಓಲೈಕೆ ಮಾಡಿ ಬೆವರಿಳಿಸಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿ 4 ಮಂದಿ ಬಿಟ್ಟರೆ ಬಹುತೇಕ ಎಲ್ಲರೂ ಹೊಸ ಮುಖಗಳಾಗಿದ್ದು, ಪುರಸಭೆಗೆ ಹೊಸ ನೀರು ಹರಿದು ಬಂದಿದೆ. 23 ವಾರ್ಡುಗಳಲ್ಲಿ 12 ಜೆಡಿಎಸ್, 9 ಕಾಂಗ್ರೆಸ್, 2 ಪಕ್ಷೇತರ ಗೆಲುವು ಸಾಧಿಸಿದ್ದಾರೆ.
ಕಣದಲ್ಲಿ ಪತ್ರಕರ್ತರು: ಈ ಬಾರಿ ವಿಶೇಷವಾಗಿ ಪುರಸಭೆ ಚುನಾವಣೆಗೆ ಪತ್ರಕರ್ತರೂ ಸ್ಪರ್ಧೆ ನಡೆಸಿದ್ದಾರೆ. ಒಟ್ಟು 6 ಮಂದಿ ಪತ್ರಕರ್ತರಲ್ಲಿ ಇಬ್ಬರು ಗೆಲವು ಸಾಧಿಸಿದ್ದು, 4 ಮಂದಿ ಸೋಲನುಭವಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement