ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರ ಪುರಸಭೆ: ಕಾಂಗ್ರೆಸ್ನ 'ಕೈ' ನುಂಗಿತ್ತಾ

Rashmi Kasaragodu
Updated On : 13 Mar 2013, 11:11 am

ಕ.ಪ್ರ.ವಾರ್ತೆ ೤ ಸಕಲೇಶಪುರ ೤ ಮಾ. 13
ಸಕಲೇಶಪುರ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 6 ಸ್ಥಾನ ಗಳಿಸಿದ್ದರೂ ಸಾಧನೆಯಲ್ಲ. ಇಲ್ಲಿ ಕಾಂಗ್ರೆಸ್ ಅನ್ನು ಆ ಪಕ್ಷದ ಮುಖಂಡರೇ ಸೋಲಿಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಪುರಸಭೆಯ 7, 8, 9, 10 ಮತ್ತು 11ನೇ ವಾರ್ಡಿನಲ್ಲಿ ಕಾಂಗ್ರೆಸ್ ಗೆಲುವಿಗೆ ಶಬ್ಬೀರ್ಖಾನ್ ಮತ್ತು ತಂಡ ಕಾರಣವಾದರೆ 21ನೇ ವಾರ್ಡಿನಲ್ಲಿನ ಅಭ್ಯರ್ಥಿ ಗೆಲುವಿಗೆ ವೈಯಕ್ತಿಕ ಮತ್ತು ಸ್ಥಳೀಯ ಶ್ರಮವೇ ಕಾರಣವಾಗಿದೆ.
ಕೇವಲ 6 ಮತಗಳ ಅಂತರದಲ್ಲಿ ಪರಾಜಿತವಾಗಿರುವ 5ನೇ ವಾರ್ಡಿನ ಅಭ್ಯರ್ಥಿ ಪ್ರಕಾಶ ಪರವಾಗಿ ಕಾಂಗ್ರೆಸ್ ಮುಖಂಡರು ಶ್ರಮವಹಿಸಲಿಲ್ಲ ಎಂದು ದೂರುತ್ತಾರೆ. 20ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ 9 ಮತಗಳಿಂದ ಪರಾಜಿತಗೊಂಡಿದ್ದು ಇವರು ಕಾಂಗ್ರೆಸ್ ಮುಖಂಡರನ್ನು ದೂರುತ್ತಾರೆ. 2ನೇ ವಾರ್ಡಿನಲ್ಲಿನ ಅಭ್ಯರ್ಥಿ ಜಯರಾಜ್ ನಿವೃತ್ತಿ ಘೋಷಿಸಿಕೊಂಡರೆ, 3ನೇ ವಾರ್ಡ್ನಲ್ಲಿ ನೀಲಯ್ಯ 3 ಮತ ಪಡೆದರು. 6ನೇ ವಾರ್ಡ್ನಲ್ಲಿ ಸುಂದರಮ್ಮ 9 ಮತಗಳಿಸಿದರು. 15ನೇ ವಾರ್ಡ್ನಲ್ಲಿ ಅಭ್ಯರ್ಥಿಯೇ ಇರಲಿಲ್ಲ.
ಎರಡು ಬಣವಾಗಿದ್ದ ಕಾಂಗ್ರೆಸ್ ಯಾವುದೇ ಯೋಜನೆ ಮಾಡದೆ 7ನೇ ವಾರ್ಡಿನಲ್ಲಿ ಟಿಕೆಟ್ ನೀಡಲು ಬೀದಿಯಲ್ಲಿ ಗಲಾಟೆ ಮಾಡಿಸಿದರು. ನಂತರ 2 ಅಭ್ಯರ್ಥಿಗಳಿಗೂ ಬಿ.ಫಾರಂ ನೀಡಿ ಗೊಂದಲ ಮೂಡಿಸಿದರು. ಈ ಪ್ರಕರಣದ ಹಿಂದೆ ಬಿದ್ದ ಕಾಂಗ್ರೆಸ್ ಇದರಿಂದ ಹೊರಬರುವ ಹೊತ್ತಿಗೆ ಚುನಾವಣೆ ಮುಗಿದಿತ್ತು.
ಪ್ರತಿಯೊಂದು ವಾರ್ಡಿಗೆ ಕನಿಷ್ಠ 2 ಕಾಂಗ್ರೆಸ್ ಮುಖಂಡರನ್ನು ಜವಾಬ್ದಾರಿ ನೀಡಿ ಬಳಸಿಕೊಂಡಿದ್ದರೆ ಏನಾದರೂ ಸಾಧನೆ ಮಾಡಬಹುದಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement