ಸಕಲೇಶಪುರದಲ್ಲಿ ಜೆಡಿಎಸ್ ಸುಭದ್ರ: ಕುಮಾರಸ್ವಾಮಿ
ಕ.ಪ್ರ.ವಾರ್ತ್ಣೆ ಸಕಲೇಶಪುರ ್ಣ ಮಾ. 13
ತಾಲೂಕಿನಲ್ಲಿ ಜೆಡಿಎಸ್ ಸುಭದ್ರವಾಗಿದೆ ಎಂಬುದನ್ನು ಸ್ಥಳೀಯ ಚುನಾವಣೆ ಸಾಬೀತು ಪಡಿಸಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ನೀತಿ, ಸಿದ್ಧಾಂತ ನಂಬಿ ಕೆಲಸ ಮಾಡುವ ಕಾರ್ಯಕರ್ತರು ಪಕ್ಷದ ಜೀವಾಳವಾಗಿದ್ದು, ಯಾರ ಕಪಿಮುಷ್ಠಿಯಲ್ಲೂ ಪಕ್ಷವಿಲ್ಲ. ಒಂದಿಬ್ಬರು ಪಕ್ಷ ತ್ಯಜಿಸಿದ ತಕ್ಷಣ ತಾಲೂಕಿನಲ್ಲಿ ಜೆಡಿಎಸ್ ಸರ್ವನಾಶವಾಗಲಿದೆ ಎಂಬ ಟೀಕಾಕಾರ ಹೇಳಿಕೆಯಲ್ಲಿ ಹುರುಳಿಲ್ಲ ಎಂದರು.
ಕಳೆದ ತಿಂಗಳು ನಡೆದ ಉಚ್ಚಂಗಿ ಹಾಗೂ ವಣಗೂರು ಗ್ರಾಪಂ ಚುನಾವಣೆಯಲ್ಲಿ ಅದ್ಬುತ ಗೆಲುವು ದಾಖಲಿಸುವ ಮೂಲಕ ಉತ್ತರ ನೀಡಿದ್ದು, ಪಕ್ಷ ಗ್ರಾಮೀಣ ಮಟ್ಟದಲ್ಲೂ ಭದ್ರವಾಗಿದೆ.
ಅಲ್ಲದೆ ಕಳೆದವಾರ ನಡೆದ ಪುರಸಭೆ ಚುನಾವಣೆಯಲ್ಲೂ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇದು ಪಟ್ಟಣ ವ್ಯಾಪ್ತಿಯಲ್ಲೂ ಜೆಡಿಎಸ್ ಅಸ್ತಿತ್ವವನ್ನು ಎತ್ತಿಹಿಡಿಯುತ್ತಿದೆ. ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.