ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕುವೆಂಪು ಪ್ರತಿಷ್ಠಾನದಿಂದ ಅಂತರ್ಜಾತಿ ವಿವಾಹ

Rashmi Kasaragodu
Updated On : 14 Mar 2013, 11:21 am

ಕ.ಪ್ರ.ವಾರ್ತೆ೤ ಹಾಸನ೤ ಮಾ.14
ಕುವೆಂಪು ಪ್ರತಿಷ್ಠಾನ ಸಾಮಾಜಿಕ ಬದಲಾವಣೆ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಮಂತ್ರ ಮಾಂಗಲ್ಯ ವಿಧಾನದಲ್ಲಿ ವಿವಾಹವಾಗಲು ಸ್ವಇಚ್ಚೆಯಿಂದ ಬರುವ ಯುವಕ ಯುವತಿಯರಿಗೆ ಕುಪ್ಪಳಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನದಲ್ಲಿ ಅವಕಾಶ ಮಾಡಿ ಕೊಡುತ್ತಿದೆ. ಮದುವೆ ಕುವೆಂಪು ಪ್ರಣೀತವಾಗಿರು ವಂತೆಯೇ ನಡೆಯಬೇಕು. ಪ್ರತಿಷ್ಠಾನದ  ನೀತಿ ನಿಯಮಾವಳಿಗಳಿಗೆ ಬದ್ಧವಾಗಿರಬೇಕು. ಇದಕ್ಕೆ ಸಿದ್ಧರಿರುವ ಎಲ್ಲಾ ಜಾತಿ ಧರ್ಮದವರಿಗೂ, ಅಂತರ್ಜಾತಿಯ ವಿವಾಹಗಳಿಗೂ ಸ್ಥಳಾವಕಾಶ ಕಲ್ಪಿಸಿ ಕೊಡಲಾಗುವುದು. ಹೇಮಾಂಗಣದಲ್ಲಿ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳಿಲ್ಲದ ನಿಗದಿತ ದಿನಗಳಲ್ಲಿ ವಿವಾಹಗಳಿಗಾಗಿ  ಎಡೆಮಾಡಿ ಕೊಡಲಾಗುವುದು. ಆಸಕ್ತರು ಕುವೆಂಪು ಪ್ರತಿಷ್ಠಾನವನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ 944893 2056 ಸಂಪರ್ಕಿಸಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement