ಪಿಯು ಪರೀಕ್ಷೆಯಲ್ಲಿ 2376 ವಿದ್ಯಾರ್ಥಿಗಳು
ಕನ್ನಡಪ್ರಭವಾರ್ತೆ ಅರಸೀಕೆರೆ ಮಾ.14
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಒಟ್ಟು 2376 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಆ ಪೈಕಿ 1051 ಬಾಲಕರು, 1325 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ಬುಧವಾರ ಬೆಳಗ್ಗೆ ಪ್ರಮುಖ 7 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭಗೊಂಡಿದ್ದು ಪಟ್ಟಣದ ಬಾಲಕೀಯರ ಸಪಪೂ ಕಾಲೇಜು, ಬಾಲಕರ ಸಪಪೂ ಕಾಲೇಜು, ಹ್ಯಾಂಡ್ಪೋಸ್ಟ್ ಪಪೂ ಕಾಲೇಜು, ಡಿ.ಎಂ.ಕುರ್ಕೆ ಸಪಪೂ ಕಾಲೇಜು, ಜಾವಗಲ್ ಸಪಪೂ ಕಾಲೇಜು, ಪ್ರತಿಭಾ ಪಪೂ ಕಾಲೇಜು ಹಾಗೂ ಕೋಡಿಮಠ ಪಪೂ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ಆರಂಭಗೊಂಡಿತು. ಮಾ.28ರಂದು ಪರೀಕ್ಷೆ ಮುಕ್ತಾಯಗೊಳ್ಳಲಿದೆ.