ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ದೇಣಿಗೆ
ಹಾಸನ: ಜಿಲ್ಲಾ ಒಕ್ಕಲಿಗರ ಸಂಘದಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿನಿಲಯ ಕಟ್ಟಡಕ್ಕೆ ಹಾಸನದ ಯಮಸಂದಿಯ ವೈ.ಪಿ. ಗೋಪಾಲಗೌಡ ತಂದೆ ದಿ.ಪುಟ್ಟೇಗೌಡ ವೈ.ಡಿ. ಹಾಗೂ ತಾಯಿ ನಂಜಮ್ಮ ಇವರ ಹೆಸರಿನಲ್ಲಿ 30 ಸಾವಿರ ರು.ಗಳನ್ನು ದೇಣಿಗೆ ನೀಡಿರುವುದಾಗಿ ಅಧ್ಯಕ್ಷ ಜೆ.ಎಲ್. ಮುದ್ದೇಗೌಡ ತಿಳಿಸಿದ್ದಾರೆ.
ವಚನಗೋಷ್ಠಿಗೆ ಆಹ್ವಾನ
ಹಾಸನ: ಜಿಲ್ಲಾ ವಚನ ಸಾಹಿತ್ಯ ಪರಿಷತ್ ಮತ್ತು ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನ ಏಪ್ರಿಲ್ 20 ರಂದು ಹಾಸನಾಂಬ ಕಲಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448318011 ಸಂಪರ್ಕಿಸ ಬಹುದು.