ಶೈಕ್ಷಣಿಕ ಕಾರ್ಯಾಗಾರ
ಹಾಸನ: ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಹಾಗೂ ಸಾಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುಭಾಷ್ ಚಂದ್ರಬೋಸರ 116ನೇ ಜನ್ಮ ದಿನಾಚರಣೆ ಅಂಗವಾಗಿ ಮಾರ್ಚ್ 16 ರಂದು ಬೆಳಗ್ಗೆ 8 ಕ್ಕೆ ಪಟ್ಟಣದ ಸಂಗಮೇಶ್ವರ ಸಮುದಾಯ ಭವನದಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ನಡೆಯಲಿದೆ.
ಖೋಖೋ, ಕಬಡ್ಡಿ ಕ್ರೀಡೆಗಳಲ್ಲಿ ತಾಂತ್ರಿಕ ಕೌಶಲ್ಯಗಳು ಬಗ್ಗೆ ಹಾಗೂ ದೈಹಿಕ ಶಿಕ್ಷಣ ಮೌಲ್ಯ ಮಾಪನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡುವರೆಂದು ಕಾರ್ಯದರ್ಶಿ ನಿರಂಜನರಾಜ್ ತಿಳಿಸಿದ್ದಾರೆ.