ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಪಿಐ, ತಹಸೀಲ್ದಾರ್ ವರ್ಗಕ್ಕೆ ಒತ್ತಾಯಿಸಿ ವಕೀಲರ ಪ್ರತಿಭಟನೆ

Rashmi Kasaragodu
Updated On : 15 Mar 2013, 11:56 am

ಹೊಳೆನರಸೀಪುರ: ಒಂದು ಪಕ್ಷದ ಪರವಾಗಿ ನಿಂತು ಉದ್ಧೇಶಪೂರ್ವಕವಾಗಿ ವಕೀಲರು ಹಾಗೂ ಕೆಲವು ವ್ಯಕ್ತಿಗಳ ವಿರುದ್ಧವಾಗಿ ವಿನಾಕಾರಣ ಮೊಕದ್ದಮೆ ದಾಖಲಿಸಿರುವುದಲ್ಲದೆ, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಅವಾಚ್ಯವಾಗಿ ನಿಂದಿಸಿ, ದೌರ್ಜನ್ಯವೆಸಗಿರುವ ಇಲ್ಲಿನ ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲ ನಾಯಕ್ ಹಾಗೂ ದುರುದ್ದೇಶದಿಂದ ದೂರು ನೀಡಿರುವ ತಹಸೀಲ್ದಾರ್ ಈಶ್ವರಪ್ಪ ಅವರ ವರ್ತನೆ ಖಂಡಿಸಿ ತಾಲೂಕು ವಕೀಲರ ಸಂಘ, ತಾಲೂಕು ಕಾಂಗ್ರೆಸ್ ಸಮಿತಿ ಹಾಗೂ ನಾಗರಿಕರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ವಕೀಲರ ಸಂಘದ ಸದಸ್ಯರು ಸೇರಿದಂತೆ, ತಾಲೂಕು ಕಾಂಗ್ರೆಸ್ ನಾಯಕಿ ಅನುಪಮ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ನಾಗರಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement