ಸ್ಕೌಟ್ಸ್ ಗೈಡ್ಸ್‌ನಿಂದ ವ್ಯಕ್ತಿತ್ವ ವಿಕಸನ
ಕನ್ನಡಪ್ರಭವಾರ್ತೆ ಹಾಸನ ಮಾ.14
ಸ್ಕೌಟ್ಸ್- ಗೈಡ್ಸ್‌ನಿಂದ ವ್ಯಕ್ತಿತ್ವ ವಿಕಸನ ಮತ್ತು ಪ್ರೀತಿ, ವಿಶ್ವಾಸ, ನಿಸ್ವಾರ್ಥ ಸೇವೆ ರೂಪಿಸಲು ಸಹಕಾರಿಯಾಗಿದೆ ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್‌ಚಂದ್ರ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಹಾಸನಾಂಬ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಲೋಕಾಯುಕ್ತ ಡಿವೈಎಸ್‌ಪಿ ಶಿವಬಸಪ್ಪ ಮಾತನಾಡಿ ನಾಯಕ ಇನ್ನೊಬ್ಬರಿಗೆ ದಾರಿ ದೀಪವಾಗಬೇಕು. ಕಣ್ಣಿಲ್ಲದಿದ್ದರು ಕನಸಿರಬೇಕು. ತನ್ನ ತಾನರಿವಿಗೆ ತನ್ನ ಅರಿವೆ ಗುರು ಎಂದು ವಿದ್ಯಾರ್ಥಿಗಳ ಮನ ಮುಟ್ಟುವಂತೆ ನುಡಿದರು. ನಂತರ ವೀರಭದ್ರಪ್ಪ ಮಾತನಾಡಿ ತನ್ನ ಜೀವನದ ಕಷ್ಟಸುಖಗಳನ್ನು ನೈಜ ಉದಾಹರಣೆಗಳ ಮೂಲಕ ವ್ಯಕ್ತಪಡಿಸಿದರು. ರೋವರ್ಸ್ ಲೀಡರ್ ಪ್ರೊ. ಉದಯಕುಮಾರ್, ರೇಜರ್ಸ್ ಲೀಡರ್ ಪ್ರೊ. ಹೇಮಾವತಿ ಎಂ.ವಿ. ಸ್ಕೌಟ್ಸ್ ಮತ್ತು ಗೈಡ್ಸ್ ಮಾಸ್ಟರ್ ಉಪೇಂದ್ರ ಹಾಗೂ ಗಿರೀಶ್ ಇದ್ದರು.