ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂತ್ಯಕ್ರಿಯೆಗೆ ಪರದಾಟ ಸ್ಮಶಾನಕ್ಕೆ ಜಾಗ ಕಲ್ಪಿಸದಿದ್ದರೆ ಪ್ರತಿಭಟನೆ

Rashmi Kasaragodu
Updated On : 15 Mar 2013, 11:21 am

ಕನ್ನಡಪ್ರಭವಾರ್ತೆ೤ ರಾಮನಾಥಪುರ೤ ಮಾ. 15
ಇಲ್ಲಿನ ಅಲ್ಪಸಂಖ್ಯಾತ ಜನಾಂಗಕ್ಕೆ ಸ್ಮಶಾನವಿಲ್ಲದ ಕಾರಣ ಈಚೆಗೆ ನಿಧನರಾದ ರಾಮನಾಥಪುರ ಸನಿಹದ ಮಲ್ಲಿರಾಜಪಟ್ಟಣದ ಸಮಾಜ ಸೇವಕ ಸಾದಿಕ್ (38) ಅವರ ಶವವನ್ನು 5 ಕಿ.ಮೀ. ದೂರದ ಕಾವೇರಿ ನದಿ ಕೃಷ್ಣರಾಜ ಅಣೆಕಟ್ಟೆಯ ಸಮೀಪವಿರುವ ಕಟ್ಟೇಪುರ ಗ್ರಾಮದ ಖಬರುಸ್ತಾನ್‌ಗೆ ತೆಗೆದುಕೊಂಡು ಹೋಗಿ   ಗುರುವಾರ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಬಗ್ಗೆ ಮುಸ್ಲಿಂ ಕಮಿಟಿ ಅಧ್ಯಕ್ಷ ಅರ್.ಎಂ. ಸಾದಿಕ್‌ಸಾಬ್ ಮಾತನಾಡಿ, ರಾಮನಾಥಪುರ ಹಾಗೂ ಪಕ್ಕ ಮಲ್ಲಿರಾಜಪಟ್ಟಣದಲ್ಲಿ ಸುಮಾರು 100 ವಕ್ಕಲುಗಳು ಮುಸಲ್ಮಾನ ಜನಾಂಗದವರು ವಾಸವಾಗದ್ದು ಇವರಿಗೆ ಶವ ಸಂಸ್ಕಾರ ಮಾಡಲು ಜಾಗವಿಲ್ಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದರು. ಎರಡು ದಿನಗಳಿಂದ ಅರೋಗ್ಯ  ಸರಿಯಿಲ್ಲದೇ ಬುಧವಾರ ಸಂಜೆ ನಿಧನರಾದ  ಸಾದಿಕ್ ಅವರನ್ನು ಗುರುವಾರ ಶವ ಸಂಸ್ಕಾರ ಮಾಡಲು ಪರದಾಡಬೇಕಾಯಿತು.
ಮುಸಲ್ಮಾನ ಜನಾಂಗದವರು ಸಾದಿಕ್ ಶವವನ್ನು ರಾಮನಾಥಪುರ ನಾಡಕಚೇರಿ ಮುಂದೆ ಇಟ್ಟು ಮತ್ತೊಂದು ಭಾರಿ ಪ್ರತಿಭಟನೆ ಮಾಡಲು ಸಜ್ಜಾಗಿದ್ದವು. ಆದರೆ ಸಂಬಂಧಪಟ್ಟ ಕೆಲವು ಹಿರಿಯರು ಹಾಗೂ ಮುಖಂಡರು ಮಧ್ಯ ಪ್ರವೇಶಿಸಿ ಪ್ರತಿಭಟನೆ ಬೇಡ, ಹತ್ತಿರದ ಕಟ್ಟೇಪುರ ಜಮಾ ಮಸೀದಿಯವರಿಗೆ ಶವಸಂಸ್ಕಾರ ಮಾಡಲು ತಿಳಿಸಿದ್ದೇವೆ ಎಂಬ ಆಶ್ವಾಸನೆ ನೀಡಿದ ನಂತರ ನಾವು ಕಟ್ಟೇಪುರದಲ್ಲಿ ಶವ ಸಂಸ್ಕಾರ ಮಾಡಿದೆವು ಎಂದರು. ರಾಮನಾಥಪುರ ವ್ಯಾಪ್ತಿಯಲ್ಲಿ ಸ್ಮಶಾನ ಜಾಗ ಕಲ್ಪಿಸದಿದ್ದರೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement