'ಕಲಾವಿದರನ್ನು ನಿರ್ಲಕ್ಷಿಸದೆ ಗೌರವಿಸಿ'
ಕಪ್ರ.ವಾರ್ತೆ ಹಾಸನ ಮಾ.15
ಯಾವುದೇ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಹಿರಿಮೆಗೆ ಕಲಾವಿದರ ಪಾತ್ರ ಅತ್ಯಂತ ಮುಖ್ಯವಾದದ್ದು. ಕಲಾವಿದರನ್ನು ನಿರ್ಲಕ್ಷಿಸದೇ ಗೌರವಿಸಿ ಅವರಿಗೆ ಸೂಕ್ತ ವೇದಿಕೆ ಮತ್ತು ಸ್ಥಾನಮಾನ ನೀಡುವುದು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ ಎಂದು ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಎಲ್. ಲೊಕೇಶ್ ತಿಳಿಸಿದರು.
ಅವರು ಪಟ್ಟಣದ ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಮತ್ತು ಜೇನುಗೂಡು ಜಾನಪದ ಗಾಯಕರ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ನೌಕರರ ಸಂಘದ ಉಪಾಧ್ಯಕ್ಷ ಮೋಹನ್ಕುಮಾರ್, ಕಲೆಯಿಂದ ನಾವು ಚಿಂತೆಮುಕ್ತರಾಗಿ, ಉತ್ತಮ ಆರೋಗ್ಯ ಪಡೆದು ಸಂತೋಷದ ಜೀವನ ನಡೆಸಬಹುದಾಗಿದೆ ಎಂದರು.