ಗಂಗೂರು ಶಾಲೆ ಹೆಚ್ಚುವರಿ ಕೊಠಡಿ ಉದ್ಘಾಟನೆ
ಕ.ಪ್ರ.ವಾರ್ತೆ ರಾಮನಾಥಪುರ ಮಾ.15
ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಲು ಸರ್ಕಾರಿ ಸೌಲಭ್ಯ, ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮುಂದೆ ಬರಲು ಸಾಧ್ಯ ಎಂದು ಕ್ಷೇತ್ರದ ಶಾಸಕ ಎ. ಮಂಜು ಅಭಿಪ್ರಾಯಪಟ್ಟರು.
ರಾಮನಾಥಪುರ ಹೋಬಳಿ ಗಂಗೂರು ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಹೆಚ್ಚುವರಿ ಶಾಲೆಗೆ 5.33 ಲಕ್ಷ ರು. ಮೌಲ್ಯದ ಶಾಲಾ ಕೊಠಡಿ ಉದ್ಘಾಟಿಸಿದ ನಂತರ ಮಾತನಾಡಿದರು.
ಗಂಗೂರು ಗ್ರಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ಹೋಬಳಿ ಅಧ್ಯಕ್ಷ ಜಿ.ಸಿ ಮಂಜೇಗೌಡ, ರಾಗಿಮರೂರು ಸಿ. ರಾಮೇಗೌಡ, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಸ್ವಾಮಿ, ಲಕ್ಕೂರು ಗ್ರಾಪಂ ಸದಸ್ಯ ಮಲ್ಲಾಪುರ ಗುರುಮಲ್ಲೇಶ್ ಇತರರು ಇದ್ದರು. ಸಿ.ಅರ್.ಪಿ. ದೇವರಾಜು ಸ್ವಾಗತಿಸಿ ವಂದಿಸಿದರು.