ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶೆಟ್ಟಿಹಳ್ಳಿಯಲ್ಲಿ ರು. 1.96 ಲಕ್ಷದ ಚಿನ್ನಾಭರಣ ಕಳವು

Rashmi Kasaragodu
Updated On : 15 Mar 2013, 11:25 am

ಕನ್ನಡಪ್ರಭವಾರ್ತೆ೤ ನುಗ್ಗೇಹಳ್ಳಿ ೤ ಮಾ. 15
ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ನಟೇಶ್‌ಕುಮಾರ್ ಎಂಬುವರ ಮನೆಯಲ್ಲಿ ಎಲ್ಲರೂ ಮಲಗಿದ್ದಾಗಲೇ ಕಳ್ಳರು 34 ಸಾವಿರ ರು. ನಗದು ಹಾಗೂ 1.96 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಇತ್ತೀಚೆಗೆ  ನಡೆದಿದೆ.
 ಕಳ್ಳರು ಮನೆಯ ಹಿಂಭಾಗದ ಬಾಗಿಲ ಬೀಗ ಒಡೆದು ಒಳಪ್ರವೇಶಿಸಿ ಬೀರುವಿನಲ್ಲಿದ್ದ 34,000 ರು.  ನಗದು ಸೇರಿ 1,96,000 ರು.  ಬೆಲೆ ಬಾಳುವ   12 ಗ್ರಾಂನ ಮುತ್ತಿನ ಚಿನ್ನದ ಓಲೆ ಸೆಟ್,  5 ಗ್ರಾಂನ ಚಿನ್ನದ ದವಳದ ಓಲೆ,  7 ಗ್ರಾಂನ ಚಿನ್ನದ ಕೊರಳಿನ ಜೈನು, 1 ಗ್ರಾಂನ 7 ಚಿನ್ನದ ಉಂಗುರಗಳು,   10 ಗ್ರಾಂನ ಚಿನ್ನದ ದವಳದ ಲಕ್ಷ್ಮೀಡಾಲರ್, 20 ಗ್ರಾಂನ ಚಿನ್ನದ ಕೊರಳಿನ ಜೈನ್ಮ್‌ತ್ತು ಗಣಪತಿ ಡಾಲರ್,   8 ಗ್ರಾಂನ ಚಿನ್ನದ ಮಾಂಗಲ್ಯದ ಗುಂಡುಗಳು,  4 ಗ್ರಾಂನ ಚಿನ್ನದ ಕುಪ್ಪಿಗೆ,   4 ಗ್ರಾಂನ ಮುರಿದ ಚಿನ್ನದ ಚೂರುಗಳು, 6 ಗ್ರಾಂನ ಚಿನ್ನದ ಓಲೆಗಳು,  4 ಗ್ರಾಂನ ಚಿನ್ನದ ಹಸಿರು ಹರಳಿನ ಉಂಗುರ,    300 ಗ್ರಾಂನ 7 ಜೊತೆ ಬೆಳ್ಳಿ ಕಾಲು ಚೈನುಗಳು,    80 ಗ್ರಾಂನ ಬೆಳ್ಳಿ ಕಾಲಂದಿಗೆ,  10 ಗ್ರಾಂನ ಬೆಳ್ಳಿ ಕಡಗಗಳು,   150 ಗ್ರಾಂನ 2 ಬೆಳ್ಳಿ ಗಣಪತಿ, 2 ಬೆಳ್ಳಿ ಲಕ್ಷ್ಮೀ, 2 ಬೆಳ್ಳಿ ದೀಪ ಮತ್ತು 2 ಬೆಳ್ಳಿ ಬಟ್ಟಲುಗಳನ್ನು  ಕಳವು ಮಾಡಿದ್ದಾರೆ.
  ಇದಾದ ನಂತರ  ಗ್ರಾಮದ ದಿನೇಶ್‌ರವರು ಮನೆಗೆ ಬೀಗ ಹಾಕಿಕೊಂಡು ಬಾಳಗಂಜಿಗೆ ಸಂಬಂಧಿಕರ ಮನೆಗೆ  ಹೋಗಿದ್ದಾಗ ಕಳ್ಳರು 24,000 ರು.  ಬೆಲೆ ಬಾಳುವ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ  ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ಜೂಜುಕೋರರ ಬಂಧನ
ಅರಸೀಕೆರೆ: ತಾಲೂಕಿನ  ಪ್ರತ್ಯೇಕ ಸ್ಥಳಗಳಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 10 ಮಂದಿಯನ್ನು  ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ತಾಲೂಕಿನ ಬಾಣಾವರ ಹೋಬಳಿ, ಶ್ಯಾನಗೆರೆ ತಿಮ್ಮನಹಳ್ಳಿ ಸಮುದಾಯ ಭವನದ ಮುಂಭಾಗದಲ್ಲಿ ಜೂಜಾಡುತ್ತಿದ್ದ  8 ಮಂದಿಯನ್ನು  ಬಂಧಿಸಲಾಗಿದೆ.
  ಕಡೂರು ತಾಲೂಕಿನ ಬಿ.ದಾಸರಹಳ್ಳಿಯ ಹನುಮಂತಪ್ಪ (36),  ತಿಮ್ಮನಹಳ್ಳಿಯ  ಪ್ರದೀಪ  (24),  ಮಹೇಂದ್ರ (32), ಚಂದ್ರಶೇಖರ (30),   ಗಂಗಾಧರ  (40),  ನಾರಾಯಣ (28),  ಷಣ್ಮುಖ (26) ದೇವರಾಜು (36) ಎಂಬವರೇ  ಬಂಧಿತ ಆರೋಪಿಗಳು.. ಜೂಜಾಟಕ್ಕಿಟ್ಟಿದ್ದ 3100 ರು.  ನಗದನ್ನು  ಬಾಣಾವರ ಠಾಣೆಯ ಪೊಲೀಸರು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
  ಮತ್ತೊಂದು ಪ್ರಕರಣದಲ್ಲಿ  ತಾಲೂಕಿನ  ಕಣಕಟ್ಟೆ ಹೋಬಳಿ, ಮಾಡಾಳು ಗ್ರಾಮದ ಆಸ್ಪತ್ರೆ ಹಿಂಭಾಗ ಕಾಂಪೌಂಡ್ ಒಳಗಡೆ ಜೂಜಾಡುತ್ತಿದ್ದ ಇಬ್ಬರನ್ನು  ಪೊಲೀಸರು ಬಂಧಿಸಿದ್ದಾರೆ.
  ಮಾಡಾಳು ಗ್ರಾಮದ  ಎಂ.ಟಿ. ಶಿವಣ್ಣ (42),  ಕರಿಯಪ್ಪ (50) ಎಂಬವರೇ  ಬಂಧಿತ ಜೂಜುಕೋರರು. ಇವರಿಂದ   ಜೂಜಾಟಕ್ಕಿಟ್ಟಿದ್ದ 1110 ರು.ನಗದನ್ನು ವಶಪಡಿಸಿಕೊಂಡಿರುವ ಬಾಣಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎರಡು ಮನೆಯಲ್ಲಿ  ಕಳವು
ಬೇಲೂರು: ತಾಲೂಕಿನ ಮಾದಿಹಳ್ಳಿಯ ಹೋಬಳಿಯ ಹಗರೆ ಗ್ರಾಮದ ಎರಡು ಮನೆಯಲ್ಲಿ ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.  ಗ್ರಾಮದ ಶಾಂತಲಾ ಬಡಾವಣೆ ವಾಸಿ ಕೃಷ್ಣಮೂರ್ತಿ ಅವರು    ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ  ಕಳ್ಳರು ಮನೆಯ ಬಾಗಿಲ ಬೀಗವನ್ನು ಹೊಡೆದು ಒಳಪ್ರವೇಶಿಸಿ ಮನೆಯೊಳಗಿದ್ದ 14,000 ರು. ಮೌಲ್ಯದ   1 ಗ್ರಾಂ ನ 2 ಚಿನ್ನದ ಉಂಗುರಗಳು,  ಒಂದು ಮಗುವಿನ ಬೆಳ್ಳಿ ಉಡಿದಾರ,  3 ಗ್ರಾಂನ  ಒಂದು ಜತೆ ಚಿನ್ನದ ಓಲೆ ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಬಗ್ಗೆ ಸೌಜನ್ಯ ರವರು  ಹಳೇಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ನಂತರ ಇದೇ  ಬಡಾವಣೆಯ ರಾಜು ಅವರು ಮನೆಗೆ ಬೀಗ ಹಾಕಿಕೊಂಡು ಹಾಲ್ತೊರೆಕೊಪ್ಪಲು ಗ್ರಾಮಕ್ಕೆ ಹೋಗಿದ್ದಾಗ  ಕಳ್ಳರು ಮನೆಯ ಬಾಗಿಲ ಬೀಗವನ್ನು ಹೊಡೆದು ಒಳಪ್ರವೇಶಿಸಿ ಮನೆಯೊಳಗಿದ್ದ 24,000 ರು.  ಬೆಲೆ ಬಾಳುವ   ಒಂದು ಜೊತೆ ಚಿನ್ನದ ಓಲೆ,  ಒಂದು ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಹ್ಯಾಂಗಿಗ್ಸ್,  ತಾಮ್ರದ ಒಂದು ಹಂಡೆ, ಒಂದು ತಾಮ್ರದ ಕೊಡ ಗಳನ್ನು ಕಳವು ಮಾಡಿದ್ದಾರೆ.
ಬೈಕ್ ಕಳವು ವಿದ್ಯಾನಗರ, ಗೌರಿಕೊಪ್ಪಲು ರಸ್ತೆ ಸೌಜನ್ಯ ನಿಲಯದ ವಾಸಿ ಸೌರಭ  ಅವರು ನಗರದ ಬಿ.ಎಂ. ರಸ್ತೆಯ ಕದಂಬ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಹೊಂಡಾ ಬೈಕನ್ನು  ಕಳ್ಳರು ಕಳವು ಮಾಡಿದಉ್‌ದಾರೆ. ಈ ಬಗ್ಗೆ ಸೌರಭ ಅವರು ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಹಿಳೆ ನಾಪತ್ತೆ
ಚನ್ನರಾಯಪಟ್ಟಣ: ತಾಲೂಕಿನ  ಕಸಬಾ ಹೋಬಳಿ, ಕಲಸಿಂದ ಗ್ರಾಮದ ತಿಮ್ಮೇಗೌಡ ಅವರ ಸೊಸೆ ರಮ್ಯ (22) ಮನೆಯಿಂದ ಹೊರಗಡೆ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಬಾಷೆ ಮಾತನಾಡುತ್ತಾಳೆ, ಮನೆಯಿಂದ ಹೋಗುವಾಗ ಕಾಫಿ ಕಲರ್ ನೈಟಿ ಧರಿಸಿದ್ದರು ಎಂದು ಆಕೆಯ ಮಾವ ತಿಮ್ಮೇಗೌಡ  ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement