ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಮಿತಿ ವಶಕ್ಕೆ ಟೌನ್ ಕ್ಲಬ್: ಸದಸ್ಯರ ಸಂಭ್ರಮ

Rashmi Kasaragodu
Updated On : 15 Mar 2013, 11:26 am


ಕ.ಪ್ರವಾರ್ತೆ೤ ಅರಸೀಕೆರೆ೤ ಮಾ. 15
ಜಿಲ್ಲೆಯ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ ಪಟ್ಟಣದ ಟೌನ್ ಕ್ಲಬ್ 2012ರ ಜೂನ್ 5 ರಂದು ಬೀಗ ಜಡಿಯುವ ಮೂಲಕ ತನ್ನ ವಶಕ್ಕೆ ತೆಗೆದುಕೊಂಡಿದ್ದನ್ನು, ಹೈಕೋರ್ಟ್ ಆದೇಶ ಮೇರೆಗೆ ಬುಧವಾರ ಸಂಜೆ ಪುರಸಭಾ ಮುಖ್ಯಾಧಿಕಾರಿ ರಂಗೇಗೌಡ ಕ್ಲಬ್‌ಅನ್ನು ಸಮಿತಿ ವಶಕ್ಕೆ ಒಪ್ಪಿಸುವ ಮೂಲಕ ಬಹುದಿನಗಳ ವಿವಾದಕ್ಕೆ ತೆರೆ ಎಳೆದರು.
  ರಾಷ್ಟ್ರೀಯ ಹೆದ್ದಾರಿ 206ರ ಬಿ.ಹೆಚ್.ರಸ್ತೆಯಲ್ಲಿ ಪುರಸಭಾ ಕಾರ್ಯಾಲಯಕ್ಕೆ ಹೊಂದಿಕೊಂಡಂತಿರುವ ಕೋಟ್ಯಂತರ ರು. ಬೆಲೆ ಬಾಳುವ ಜಾಗದಲ್ಲಿ 1932ರಲ್ಲಿ ಟೌನ್ ಕ್ಲಬ್ ಹೆಸರಿನೊಂದಿಗೆ ಮನರಂಜನಾ ಕೇಂದ್ರವಾಗಿ ಆರಂಭಗೊಂಡು ನಿರಂತರ 8 ದಶಕಗಳ ಕಾಲ ನಡೆಯುತ್ತಾ ಬಂದಿದ್ದ ಈ ಕ್ಲಬ್‌ಗೆ ನಾನಾ ರಾಜಕೀಯ ಮುಖಂಡರು, ವರ್ತಕರು ಹಾಗೂ ಉದ್ಯಮಿಗಳು ಒಳಗೊಂಡಂತೆ ತಾಲೂಕಿನ ಪ್ರಮುಖ ಗಣ್ಯರು ಸದಸ್ಯತ್ವ ಹೊಂದಿದ್ದರಿಂದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಟೌನ್‌ಕ್ಲಬ್ ಕೂಡಾ ಒಂದಾಗಿತ್ತು.
ದಶಕಗಳ ಕಾಲ ಪುರಸಭೆಗೆ ಸೇರಿದ ಜಾಗದಲ್ಲಿ ಟೌನ್‌ಕ್ಲಬ್ ನಡೆಯುತ್ತಿದ್ದರಿಂದ ಜನಪರ ಸಂಘಟನೆಯ ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಿಂದ, ಅಲ್ಲದೇ ಕ್ಲಬ್ ತೆರವುಗೊಳಿಸಿ ಕೋಟ್ಯಂತರ ರು. ಬೆಲೆ ಬಾಳುವ ನಿವೇಶನ ಹಾಗೂ ಕಟ್ಟಡವನ್ನು ಪುರಸಭೆಗೆ ತೆಗೆದುಕೊಳ್ಳಬೇಕೆಂದು ಒತ್ತಡ ತಂದಿದ್ದರು.
   ಇದರಿಂದ ಅನಿವಾರ್ಯವಾಗಿ ಕ್ಲಬ್‌ಗೆ ಜೂನ್ 5ರಂದು ಬೀಗ ಜಡೆಯುವ ಮೂಲಕ ಪುರಸಭೆ ತನ್ನ ವಶಕ್ಕೆ ಪಡೆದುಕೊಂಡಿತು.
  ಪುರಸಭೆಯ ಈ ಕ್ರಮವನ್ನು ಪ್ರಶ್ನಿಸಿ ಟೌನ್‌ಕ್ಲಬ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸುದೀರ್ಘ ವಿಚಾರಣೆ ಬಳಿಕ ಹೈಕೋರ್ಟ್ ಟೌನ್ ಕ್ಲಬ್ ಅನ್ನು ಸಮಿತಿಗೆ ತಾತ್ಕಾಲಿಕವಾಗಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಬೀಗ ತೆರೆಯಲಾಯಿತು.
  ನ್ಯಾಯಾಲಯ ಆದೇಶದ ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನೂರಾರು ಸದಸ್ಯರು ಪರಸ್ಪರ ಕೈ ಕುಲುಕಿ ಅಭಿನಂದಿಸಿದರು. ಅಲ್ಲದೇ ಕ್ಲಬ್ ಆವರಣ ಅಶುಚಿತ್ವದಿಂದ ಕೂಡಿರುವುದನ್ನು ಕಂಡು ಪುರಸಭೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಟೌನ್ ಕ್ಲಬ್‌ನ್ನು ಜಿಲ್ಲಾಧಿಕಾರಿ ಆದೇಶದಂತೆ ಸಮಿತಿಗೆ ಹಸ್ತಾಂತರಿಸಲಾಗಿದೆ. ಬೀಗ ಹಾಕಿರುವ ವೇಳೆಯಲ್ಲಿ  ಅಶುಚಿತ್ವ ಉಂಟಾಗಿದ್ದು ಸಿಬ್ಬಂದಿಯಿಂದ ಕೂಡಲೇ ಸ್ವಚ್ಛಗೊಳಿಸಿ ಕೊಡಲಾಗುವುದು. ಅಲ್ಲದೇ ಹಾಳಾಗಿರುವ ಸಾಮಗ್ರಿಗಳನ್ನು ಪುರಸಭಾ ವೆಚ್ಚದಿಂದಲೇ ದುರಸ್ತಿಪಡಿಸಿಕೊಡಲಾಗುವುದು
-ರಂಗೇಗೌಡ ಮುಖ್ಯಾಧಿಕಾರಿ

ಪಟ್ಟಣದ ಮನರಂಜನೆಯ ತಾಣವಾಗಿದ್ದ ಟೌನ್‌ಕ್ಲಬ್ ಅನ್ನು  ದುರುದ್ದೇಶಪರ್ಬ್ವಕವಾಗಿಯೇ ಮುಚ್ಚುವಂತೆ  ಮಾಡಲಾಗಿತ್ತು. ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ಕ್ಲಬ್ ಪುನಾರಂಭಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಹಾಗೂ ಸಂತೋಷದ ಸಂಗತಿ.

- ದೊಡ್ಡಣ್ಣ, ಚಲನಚಿತ್ರ ನಟ ಹಾಗೂ ಕ್ಲಬ್ ಸದಸ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement