ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಚ್.ಬಿ.ಚಿಕ್ಕೇಗೌಡ ನಿಧನ

Rashmi Kasaragodu
Updated On : 16 Mar 2013, 11:40 am

ಆಲೂರು: ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಬಿ.ಚಿಕ್ಕೇಗೌಡ (86) ಅನಾರೋಗ್ಯದಿಂದ ಶುಕ್ರವಾರ ಸಂಜೆ  ನಿಧನರಾದರು. ಮೃತರು ಸರ್ವೇ ಇಲಾಖೆಯ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರ ನಾನಾ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಜನ ಮನ್ನಣೆಗಳಿಸಿದ್ದರು. ಮೃತರಿಗೆ ಪತ್ನಿ, 9 ಜನ ಮಕ್ಕಳು ಇದ್ದಾರೆ.
 ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎಚ್.ಪಿ.ಮೋಹನ್, ಶಾಸಕ ಎಚ್.ಕೆ.ಕುಮಾರ ಸ್ವಾಮಿ, ಮಾಜಿ ಶಾಸಕ ಎಂ.ವಿಶ್ವನಾಥ್, ಬಿ.ಆರ್.ಗುರುದೇವ್, ಕೃಷಿ ಪತ್ತಿನ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ.ಶಿವರಾಮೇಗೌಡ, ಕಸಾಪ ಅಧ್ಯಕ್ಷ ಪಿ.ಎಚ್.ಗುಲಾಂಸತ್ತಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ರಂಗನಾಥ್,  ತಾಲೂಕು  ಜೆಡಿಎಸ್  ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಎ.ಟಿ.ಮಲ್ಲೇಶ್, ತಾಲೂಕು   ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಚ್.ಎಸ್.ವೆಂಕಟೇಶ್, ಕಾಂಗ್ರೆಸ್ ಮುಖಂಡ ಅಪ್ಪಾಜಿಗೌಡ, ಒಕ್ಕಲಿಗರ ಸಂಘದ ಕೆ.ವೈ.ಲಕ್ಷ್ಮೇಗೌಡ, ಜಿ.ಆರ್.ಗುಂಡಪ್ಪ, ಟೀಕರಾಜ್, ಬ್ಯಾಬ ಧರ್ಮಪ್ಪ ಇತರರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಹುಣಸವಳ್ಳಿಯಲ್ಲಿ ಶನಿವಾರ ನೆರವೇರಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement