ಬಾಲ ನ್ಯಾಯ ಮಂಡಳಿ ಸದಸ್ಯತ್ವಕ್ಕಾಗಿ ಆಹ್ವಾನ
ಹಾಸನ: ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2000 ತಿದ್ದುಪಡಿ ಕಾಯ್ದೆ 2006ರನ್ವಯ ಪ್ರತಿ ಜಿಲ್ಲೆಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲನ್ಯಾಯ ಮಂಡಳಿಗಳನ್ನು ರಚಿಸಲು ಅಕ್ಟೋಬರ್ 2013 ರಿಂದ ಅಕ್ಟೋಬರ್ 2016ರ ವರೆಗೆ 3 ವರ್ಷಗಳ ಕಾಲಾವಧಿ ಸದಸ್ಯತ್ವಕ್ಕಾಗಿ ಅರ್ಹ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.31 ಕೊನೆ ದಿನ. ಅರ್ಜಿ ನಮೂನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್ ಜಢ್ಛಿಜ್ಞಛ್ಠ.್ಜ್ಟಢ.್ಝಟಿ ನಲ್ಲಿ ಲಭ್ಯವಿದೆ.