ಸ್ತ್ರೀ ಸಶಕ್ತೀಕರಣ ಕುರಿತು ಹಿಂದಿಯಲ್ಲಿ ವಿದ್ಯಾರ್ಥಿನಿಯರಿಗೆ ವಿಚಾರಗೋಷ್ಠಿ
ಕ.ಪ್ರವಾರ್ತೆ ಹಾಸನ ಮಾ. 15
ವಿಜಯ ಬ್ಯಾಂಕ್ ಆಶ್ರಯದಲ್ಲಿ ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸ್ತ್ರೀಸಶಕ್ತೀಕರಣ ಎಂಬ ವಿಷಯದ ಬಗ್ಗೆ, ಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ವಿಚಾರಗೋಷ್ಠ್ನಿ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಶೈಲಜಾಕುಮಾರಿ ಮಾತನಾಡಿ, ಮಹಿಳೆಯರಿಗೆ ಸಿಕ್ಕಿರುವ ಸವಲತ್ತು ಹಾಗೂ ಇನ್ನೂ ಮುಂದೆ ಒದಗಿಸಬೇಕಾದ ಸೌಲಭ್ಯಗಳ ಅವಶ್ಯಕತೆಯ ಬಗ್ಗೆ ಮಾತನಾಡಿದರು. ವಿಜಯ ಬ್ಯಾಂಕಿನ ಮುಖ್ಯ ಪ್ರಬಂಧಕಿ ಕೆ.ಆರ್.ಸುಬ್ಬಲಕ್ಷ್ಮಿ ಮಾತನಾಡಿ, ಬ್ಯಾಂಕಿನಲ್ಲಿ ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯಗಳು ಹಾಗೂ ಬ್ಯಾಂಕ್ಗಳಲ್ಲಿ ಆಡಳಿತ ಭಾಷೆಯಾಗಿ ಹಿಂದಿ ಭಾಷೆಯ ಬಳಕೆಗಳ ಬಗ್ಗೆ ತಿಳಿಸಿಕೊಟ್ಟರು.
ವಿಜಯ ಬ್ಯಾಂಕಿನ ವ್ಯವಸ್ಥಾಪಕಿ ರಾಶಿ ಶರ್ಮಾ ಹಾಗೂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ರತ್ನಮ್ಮ ಇದ್ದರು. ಅನೇಕ ವಿದ್ಯಾರ್ಥಿನಿಯರು ಸ್ತ್ರೀಸಶಕ್ತೀಕರಣದ ಬಗ್ಗೆ ಪ್ರಬಂಧ ಮಂಡಿಸಿದರು. ಉತ್ತಮ ಪ್ರಬಂಧಗಳಿಗೆ ವಿಜಯ ಬ್ಯಾಂಕಿನ ವತಿಯಿಂದ ಬಹುಮಾನ ವಿತರಿಸಲಾಯಿತು.