ಆಯುರ್ವೇದದಿಂದ ಉತ್ತಮ ಆರೋಗ್ಯ: ಡಾ. ಮಹೇಶ್
ಚನ್ನರಾಯಪಟ್ಟಣ: ಮನುಷ್ಯನ ಆರೋಗ್ಯ ಮತ್ತು ದೈಹಿಕ ಸದೃಢತೆಗೆ ಆಯುರ್ವೇದ ಚಿಕಿತ್ಸೆ ಉತ್ತಮವಾದದ್ದು. ಚಿಕಿತ್ಸೆ ಪಡೆದರೆ ಔಷಧಿಯಿಂದ ವಿವಿಧ ಕಾಯಿಲೆ ಹಾಗೂ ತೊಂದರೆಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ. ಮಹೇಶ್ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಡಾ. ಧನಶೇಖರ್ ಮಾತನಾಡಿ, ಭಾರತದಲ್ಲಿ ಆಯುರ್ವೇದ ಪದ್ಧತಿ ದಿನೇ ದಿನೇ ಜನಪ್ರಿಯವಾಗುತ್ತಿದ್ದು, ಅಡ್ಡ ಪರಿಣಾಮ ಇಲ್ಲದ ವಿಶ್ವಾಸ ಚಿಕಿತ್ಸೆ ಇದಾಗಿದೆ. ಚಿಕಿತ್ಸೆ ಪಡೆಯುವ ರೋಗಿಗಳು ವೈದ್ಯರಲ್ಲಿ ವಿಶ್ವಾಸ ಇಡಬೇಕು ಎಂದರು.
ಡಾ. ಆದೀಬ್ ಉಲ್ಲಾ ಯುನಾನಿ, ಡಾ. ರವೀಂದ್ರ ಆಯುರ್ವೇದ, ಡಾ. ಪರಿಮಳ ಔಷಧಿ ಸಸ್ಯಗಳು, ಡಾ. ಜಯಂತ್, ಡಾ. ವಿಜುಲ, ಆಯುಷ್ ಬಗ್ಗೆ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ. ನಾಗೇಶ್ ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಮಚಂದ್ರ ಸ್ವಾಗತಿಸಿ ವಂದಿಸಿದರು.