ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಿರಂಜನ್ ರಾಜಿನಾಮೆ
ಕ.ಪ್ರ.ವಾರ್ತೆ ಅರಸೀಕೆರೆ ಮಾ.17
ಶಾಸಕ ಕೆ.ಎಂ. ಶಿವಲಿಂಗೇಗೌಡರ ಒಡೆದು ಆಳುವ ನೀತಿ, ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಜಿ. ನಿರಂಜನ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15-20 ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತನಾಗಿ ಕಳೆದ 10 ವರ್ಷಗಳಿಂದ ಕುಮಾರಸ್ವಾಮಿ ಅಭಿಮಾನಿ ಸಂಘವನ್ನು ಸ್ಥಾಪಿಸಿ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಕೆ.ಎಂ. ಶಿವಲಿಂಗೇಗೌಡರು ಶಾಸಕರಾದ ನಂತರ ನನ್ನ ಹಾಗೂ ಎಚ್.ಡಿ. ಕುಮಾರಸ್ವಾಮಿ ನಡುವೆ ಇದ್ದ ಸ್ನೇಹ ಹಾಗೂ ವಿಶ್ವಾಸವನ್ನು ತಪ್ಪು ತಿಳಿದುಕೊಂಡು ನನ್ನ ಸ್ಥಾನಕ್ಕೆ ಇವರು ಪ್ರತಿಸ್ಪರ್ಧಿ ಎಂಬ ಭಾವನೆಯಿಂದ ನನ್ನನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ಮನನೊಂದು ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭೈರಗೊಂಡನಹಳ್ಳಿ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಜಶೇಖರ್, ವೈ.ಎಸ್. ಶಂಕರಪ್ಪ, ಕುರುಬರಹಳ್ಳಿ ಪಟೇಲ್ ರಾಜಶೇಖರ್ ಹಾಗೂ ರಮೇಶ್ ಇದ್ದರು.