ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಾರ್ಕ್ ಪರಿಕರ ಮುರಿದ ದೊಡ್ಡವರು

Rashmi Kasaragodu
Updated On : 17 Mar 2013, 11:34 am


ಕ.ಪ್ರ.ವಾರ್ತೆ   ಹಾಸನ   ಮಾ. 17
ಇದೊಂದು ದೊಡ್ಡವರ ದಡ್ಡತನ ಮಾತ್ರವಲ್ಲ.. ಸಣ್ಣತನಕ್ಕೂ ಸಾಕ್ಷಿಯಾಗಿದೆ. ಹಾಸನ ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕಿನಲ್ಲಿ ಪುಟಾಣಿ ಮಕ್ಕಳಿಗೆಂದು ನೂತನ ಆಟವಾಡುವ ವಸ್ತುಗಳನ್ನು ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ.
ಆದರೆ ಅದು ಪೂರ್ಣ ಕಾಮಗಾರಿ ಮುಗಿದು ಉದ್ಘಾಟನೆ ಆಗುವ ಮುನ್ನವೇ ಈಗ ಒಂದೊಂದಾಗಿ ಮುರಿದು ಹೋಗುತ್ತಿದೆ. ಇದಕ್ಕೆ ಕಾರಣ ಆಟವಾಡುವ ಉಪಕರಣಗಳನ್ನು ದೊಡ್ಡವರು ಬಳಕೆ ಮಾಡುತ್ತಿರುವುದೇ ಸಾಕ್ಷಿ.
ಈ ಹಿಂದೆ ಮಕ್ಕಳ ಆಟೋಟ ವಸ್ತುಗಳು ಹಾಳಾಗಿದ್ದರಿಂದ ನಗರಸಭೆ ಎಲ್ಲಾವನ್ನು ದುರಸ್ತಿ ಮಾಡಿದಲ್ಲದೇ ಹೊಸ ಹೊಸ ಆಟವಾಡುವ ವಸ್ತುಗಳನ್ನು ನಿರ್ಮಿಸಲು ಮುಂದಾಯಿತು. ದಿನನಿತ್ಯ ನೂರಾರು ಮಕ್ಕಳು ಆಟವಾಡಲು ಬರುತ್ತಾರೆ ಅಷ್ಟೆ. ಆದರೆ ಮಕ್ಕಳ ಜೊತೆ ಬರುವ ಕೆಲ ತಂದೆ-ತಾಯಿ ಹಾಗೂ ದೊಡ್ಡವರು ಕೂಡ ಆಟೋಟ ವಸ್ತುಗಳಲ್ಲಿ ಆಟವಾಡುತ್ತಿರುವುದು  ವಿಪರ್ಯಾಸವೇ ಆಗಿದೆ.
ಮತ್ತೆ ಸಿದ್ಧಪಡಿಸಬೇಕು: ಈಗ ಪಾರ್ಕ್ ಒಳಗೆ ಅಳವಡಿಸಿರುವ ಆಟೋಟ ವಸ್ತುಗಳು ಬಹು ಭಾಗ ಹಾಳಾಗಿದೆ. ಮತ್ತೆ ಲಕ್ಷಾಂತರ ರು. ವೆಚ್ಚ ಮಾಡಿ ಸಿದ್ಧಪಡಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ.  
ನಾಗರಿಕರಲ್ಲಿ ಸ್ವಲ್ಪವಾದರೂ ತಿಳಿವಳಿಕೆ ಬರಬೇಕು ಎಂಬುದು ಅನೇಕರ ಅಭಿಪ್ರಾಯವಾಗಿದೆ. ಅನಾಗರಿಕತ ಬಿಟ್ಟು ನಾಗರಿಕರು ಅರ್ಥಮಾಡಿಕೊಂಡು ಮಕ್ಕಳ ಆಟೋಟ ವಸ್ತುಗಳನ್ನು ಕಾಪಾಡಬೇಕು. ಹೆಸರಿಗೆ ಮಾತ್ರ ಒಬ್ಬ ಸೆಕ್ಯೂರಿಟಿ ಇದ್ದಾರೆ ಅಷ್ಟೇ.. ದೊಡ್ಡವರು ಮಕ್ಕಳ ಆಟೋಟಗಳಲ್ಲಿ ಆಡುತ್ತಿದ್ದಾಗ ಸೆಕ್ಯೂರಿಟಿ ಹೇಳಲು ಹೋದರೆ ಮಾತು ಕೇಳದೆ ಹೆದರಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement